ADVERTISEMENT

ಸಿಕ್ಕಿಂ ಸಚಿವರ ಮೃತದೇಹ ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಪತ್ತೆ

ಪಿಟಿಐ
Published 17 ಜುಲೈ 2024, 14:52 IST
Last Updated 17 ಜುಲೈ 2024, 14:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಂಗಾಟೋಕ್‌ : ಒಂಬತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಸಿಕ್ಕಿಂನ ಸಚಿವ ಆರ್‌.ಸಿ. ಪೌಡ್ಯಾಲ್ ಅವರ ಮೃತದೇಹವು ಮಂಗಳವಾರ ಪಶ್ಚಿಮ ಬಂಗಾಳದ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ.

‘ಪೌಡ್ಯಾಲ್‌ ಅವರ ಮೃತದೇಹವು ತೀಸ್ತಾ ಕಾಲುವೆಯಲ್ಲಿ ಮಂಗಳವಾರ ತೇಲುತ್ತಿತ್ತು’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.  

ADVERTISEMENT

‘ಪ್ರಾಥಮಿಕ ತನಿಖೆ ಆಧಾರದಲ್ಲಿ, ಶವವನ್ನು ತೀಸ್ತಾ ನದಿಯ ಮೇಲ್ದಂಡೆಯಿಂದ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕೈಗಡಿಯಾರ ಮತ್ತು ಶವದ ಮೇಲಿದ್ದ ವಸ್ತ್ರದ ಮೂಲಕ ಗುರುತು ಪತ್ತೆಹಚ್ಚಲಾಯಿತು’ ಎಂದು ಹೇಳಿದ್ದಾರೆ.

ಪೌಡ್ಯಾಲ್ ಸಾವಿನ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಕ್ಯೋಂಗ್ ಜಿಲ್ಲೆಯ ಛೋಟ ಸಿಂಗ್ತಾಮ್ ಜಿಲ್ಲೆಯಿಂದ ಜುಲೈ 7ರಿಂದ ಪೌಡ್ಯಾಲ್ ಕಾಣೆಯಾಗಿದ್ದರು. ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಸಿಕ್ಕಿಂ ವಿಧಾನಸಭೆಯ ಮಾಜಿ ಉಪಸಭಾಪತಿ, ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪೌಡ್ಯಾಲ್, ಸಿಕ್ಕಿಂ ರಾಜ್ಯ ರಾಜಕಾರಣದ ಪ್ರಮುಖ ನಾಯಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.