ADVERTISEMENT

ಐಎಎಫ್‌ ಬತ್ತಳಿಕೆಗೆ ‘ಚಿನೂಕ್‌’ ಸೇರ್ಪಡೆ: ಕ್ಷಿಪ್ರ ಸಾಗಾಣಿಕೆಗೆ ಎತ್ತಿದ ‘ಕೈ’

ಪಿಟಿಐ
Published 11 ಫೆಬ್ರುವರಿ 2019, 1:26 IST
Last Updated 11 ಫೆಬ್ರುವರಿ 2019, 1:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆರಿಕ ಮೂಲದ ಬೋಯಿಂಗ್‌ ಸಂಸ್ಥೆ ತಯಾರಿಸಿದ ನಾಲ್ಕು ‘ಚಿನೂಕ್‌ ಮಿಲಿಟರ್‌ ಹೆಲಿಕಾಪ್ಟರ್‌’ಗಳು ಭಾನುವಾರ ಗುಜರಾತ್‌ನ ಮುಂಡ್ರಾ ಬಂದರು ತಲುಪಿವೆ.

ಸಂಸ್ಥೆಯು ಮೊದಲ ಹಂತದಲ್ಲಿ ಪೂರೈಕೆ ಮಾಡಿದ ಈ ನಾಲ್ಕು ಹೆಲಿಕಾಪ್ಟರ್‌ಗಳನ್ನು (ಸಿಎಚ್‌47ಎಫ್‌(1)) ಚಂಡೀಗಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ನಂತರ ಅವುಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸೇನಾ ತುಕಡಿಗಳು, ಆರ್ಟಿಲರಿ, ಸಲಕರಣೆ ಹಾಗೂ ಇಂಧನವನ್ನು ಕ್ಷಿಪ್ರವಾಗಿ ಸಾಗಣೆ ಮಾಡಲು ಈ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು, ಪರಿಹಾರ ಸಾಮಗ್ರಿಗಳ ಪೂರೈಕೆ ಹಾಗೂ ಬೃಹತ್ ಸಂಖ್ಯೆಯಲ್ಲಿರುವ ನಿರಾಶ್ರಿತರನ್ನು ಬೇರೆಡೆ ಸ್ಥಳಾಂತರಿಸಲು ಸಹ ಬಳಕೆ ಮಾಡಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.