ADVERTISEMENT

ಚೆನ್ನೈ | ಬಾಂಬ್ ಬೆದರಿಕೆ: ವಿಮಾನ ಹಾರಾಟ 2 ಗಂಟೆ ವಿಳಂಬ

ಪಿಟಿಐ
Published 3 ಜೂನ್ 2024, 15:42 IST
Last Updated 3 ಜೂನ್ 2024, 15:42 IST
<div class="paragraphs"><p>ಇಂಡಿಗೊ ವಿಮಾನದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ&nbsp;ತಮಿಳುನಾಡಿನ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಸೋಮವಾರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು  </p></div>

ಇಂಡಿಗೊ ವಿಮಾನದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಸೋಮವಾರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು

   

–ಪಿಟಿಐ ಚಿತ್ರ

ಚೆನ್ನೈ: ಬಾಂಬ್ ಬೆದರಿಕೆಯ ಕರೆಯಿಂದಾಗಿ ಚೆನ್ನೈನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೊ ವಿಮಾನವು ಸೋಮವಾರ ಎರಡು ಗಂಟೆ ವಿಳಂಬವಾಗಿ ತನ್ನ ಪ್ರಯಾಣ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಇಲ್ಲಿನ ತುರೈಪಕ್ಕಂ ಎಂಬಲ್ಲಿರುವ ಇಂಡಿಗೊ ಕಾಲ್ ಸೆಂಟರ್‌ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ಇದರಿಂದಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದ ಅಧಿಕಾರಿಗಳು, ಕೂಲಂಕಷವಾಗಿ ವಿಮಾನವನ್ನು ಪರಿಶೀಲಿಸಿದರು. ಭದ್ರತಾ ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿಕ ಬೆಳಿಗ್ಗೆ 10.30ಕ್ಕೆ ಚೆನ್ನೈನಿಂದ ಈ ವಿಮಾನ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.