ADVERTISEMENT

ಪಾಕ್ ಗಡಿಯಲ್ಲಿ ಎಕೆ-47 ಮತ್ತು ಎಂ-16 ರೈಫಲ್ ತುಂಬಿದ್ದ ಬ್ಯಾಗ್ ವಶಕ್ಕೆ

ಪಿಟಿಐ
Published 12 ಸೆಪ್ಟೆಂಬರ್ 2020, 13:13 IST
Last Updated 12 ಸೆಪ್ಟೆಂಬರ್ 2020, 13:13 IST
ಗಡಿ ಸಮೀಪ ಹೊಲವೊಂದರಲ್ಲಿ ಬಿದ್ದಿದ್ದ ಬ್ಯಾಗ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಿಎಸ್‌ಎಫ್ ಪತ್ತೆ ಮಾಡಿದೆ
ಗಡಿ ಸಮೀಪ ಹೊಲವೊಂದರಲ್ಲಿ ಬಿದ್ದಿದ್ದ ಬ್ಯಾಗ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಿಎಸ್‌ಎಫ್ ಪತ್ತೆ ಮಾಡಿದೆ   

ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಪಾಕ್ ಗಡಿಯಲ್ಲಿರುವ ಹೊಲವೊಂದರಲ್ಲಿಮೂರು ಎಕೆ-47 ಮತ್ತು ಎರಡು ಎಂ-16 ರೈಫಲ್‌ಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ವಶಪಡಿಸಿಕೊಂಡಿದೆ.

ಶೋಧ ಕಾರ್ಯಾಚರಣೆ ವೇಳೆ, ಬಿಎಸ್‌ಎಫ್‌ ಪಡೆಗಳು ಬೆಳಿಗ್ಗೆ 7 ಗಂಟೆ ಸುಮಾರಿಗೆ ಗಡಿಯ ಸಮೀಪ ಹೊಲವೊಂದರಲ್ಲಿ ಬಿದ್ದಿದ್ದ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಕೆ-47 ರೈಫಲ್‌ಗೆ ಬಳಸುವ ಆರು ಮ್ಯಾಗಜೀನ್‌ಗಳು ಮತ್ತು 91 ಗುಂಡುಗಳು, ಎಂ-16 ರೈಫಲ್‌ನ 4 ಮ್ಯಾಗಜೀನ್‌ಗಳು ಮತ್ತು 51 ಗುಂಡುಗಳು, 4 ಮ್ಯಾಗಜೀನ್‌ ಸಹಿತ 2 ಪಿಸ್ತೂಲ್‌ಗಳು, 20 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಅಂತರರಾಷ್ಟ್ರೀಯ ಗಡಿಯಲ್ಲಿನ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಅಬೋಹಾರ್ ಮೂಲಕ ಪಾಕಿಸ್ತಾನದಿಂದ ದೇಶ ವಿರೋಧಿ ಕೃತ್ಯಕ್ಕೆ ನೆರವಾಗಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸದ್ಯ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.