ವಾಘಾ: ಪಂಜಾಬ್‌ನ ಅಟ್ಟಾರಿ ವಾಘಾ ಗಡಿಯಲ್ಲಿ ತೀವ್ರ ತಾಪಮಾನ ವರದಿಯಾಗಿದೆ. ಸದ್ಯ ಅಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನವಿದ್ದು, ಸೈನಿಕರು ಬಿರುಬಿಸಿಲಿನ ನಡುವೆಯೂ ಗಡಿ ಪಹರೆಯಲ್ಲಿ ನಿರತರಾಗಿದ್ದಾರೆ.
ತಾಪಮಾನ, ಬಿಸಿಗಾಳಿಯ ನಡುವೆಯೂ ಗಡಿ ಭದ್ರತಾ ಪಡೆಯ ಸೈನಿಕರು ಗಡಿ ಗಸ್ತಿನಲ್ಲಿ ತೊಡಗಿರುವ ಕುರಿತು ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ನಮ್ಮ ಮೊದಲ ಆದ್ಯತೆ ರಾಷ್ಟ್ರ ರಕ್ಷಣೆ. ಆಗ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಹವಾಮಾನ ವೈಪರಿತ್ಯಗಳು ನಮ್ಮನ್ನು ಧೃತಿಗೆಡಿಸುವುದಿಲ್ಲ,’ ಎಂದು ಬಿಎಸ್‌ಎಫ್ ಯೋಧರು ಹೇಳಿದ್ದಾರೆ.
ಇತ್ತೀಚೆಗೆ ಪೂರ್ವ ಲಡಾಕ್‌ನ ಗಾಲ್ವನ್ ಕಣಿವೆಯಲ್ಲಿ ಭಾರತದ 20 ಯೋಧರು ಯೋಧರು ಚೀನಾದೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.