ನವದೆಹಲಿ: ಅದಾನಿ ವಿವಾದ ಸಂಬಂಧ ಮಂಗಳವಾರವೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿದೆ.
ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಮಂಗಳವಾರವೂ ಕಪ್ಪು ದಿರಿಸು ಧರಿಸಿಕೊಂಡು ಬಂದಿದ್ದ ವಿಪಕ್ಷಗಳ ಸದಸ್ಯರು, ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ, ಸದನದ ಬಾವಿಗೆ ಇಳಿದು ಘೋಷಣೆ ಮೊಳಗಿಸಿದರು.
ಕೆಲ ಸದಸ್ಯರು ಕಾಗದ ಪತ್ರಗಳನ್ನು ಸ್ಪೀಕರ್ ಕುರ್ಚಿಯತ್ತ ತೂರಿದರು. ಪರಿಣಾಮ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುಂದೂಡಬೇಕಾಯಿತು.
ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅದಾನಿ ಪ್ರಕರಣ ಸಂಬಂಧ ಜಂಟಿ ಸದನ ಸಮಿತಿ ರಚನೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು. ಕಲಾಪ ಮುಂದುವರಿಸಲಾಗದೆ 2 ಗಂಟೆಗೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.