ADVERTISEMENT

ಹಿಂದಿ ಪುಸ್ತಕ ತರದ್ದಕ್ಕೆ ಥಳಿಸಿದ ಶಿಕ್ಷಕ: ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

ಪಿಟಿಐ
Published 17 ಆಗಸ್ಟ್ 2023, 9:57 IST
Last Updated 17 ಆಗಸ್ಟ್ 2023, 9:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹಿಂದಿ ಭಾಷೆಯ ಪುಸ್ತಕವನ್ನು ಮನೆಯಲ್ಲೇ ಮರೆತು ಬಂದಿದ್ದಕ್ಕೆ ಸರ್ಕಾರಿ ಶಾಲೆಯೊಂದರ 6ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಥಳಿಸಿದ್ದು, ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ನೈರುತ್ಯ ದೆಹಲಿಯ ತುಕ್ಮಿರಪುರ್‌ ಪ್ರದೇಶದ ಶಾಲೆಯಲ್ಲಿ ಆಗಸ್ಟ್‌ 7 ರಂದು  ಘಟನೆ ನಡೆದಿದೆ. ಕಳೆದ ಶನಿವಾರ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿಯ ಜಿಟಿಬಿ ಆಸ್ಪತ್ರೆಯು ಪೊಲೀಸರಿಗೆ ಮಾಹಿತಿ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ವಿದ್ಯಾರ್ಥಿಯ ತಂದೆ ಕೂಡ ಆರೋಪಿ ಶಿಕ್ಷಕ ಸಾದುಲ್‌ ಹಸನ್‌ ಎನ್ನುವವರ ವಿರುದ್ಧ ದೂರು ದಾಖಲಿಸಿದ್ದರು.

ADVERTISEMENT

‘ಶಾಲೆಗೆ ಬರುವಾಗ ಹಿಂದಿ ಭಾಷೆಯ ಪುಸ್ತಕ ತರುವುದನ್ನು ಮರೆತ ಬಾಲಕನಿಗೆ ಶಿಕ್ಷಕ ಥಳಿಸಿದ್ದು, ಕುತ್ತಿಗೆಯನ್ನೂ ಹಿಡಿದಿದ್ದಾರೆ. ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಶಿಕ್ಷಕ ಹುಸೇನ್‌ ಅನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.