ADVERTISEMENT

ತೇಜಸ್ವಿ ವಿರುದ್ಧ ಮೀಟೂ: ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಸಮರ–ಸೋಮದತ್ತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 12:58 IST
Last Updated 14 ಏಪ್ರಿಲ್ 2019, 12:58 IST
   

ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧಕಾಂಗ್ರೆಸ್‌ ವಕ್ತಾರ ಬ್ರಿಜೇಶ್ ಕಾಳಪ್ಪ ಆಡಿಯೋ ರಿಲೀಸ್ ಮಾಡಿರುವುದರ ವಿರುದ್ಧ ತೇಜಸ್ವಿ ಗೆಳತಿ ಸೋಮದತ್ತ ಕಿಡಿ ಕಾರಿದ್ದಾರೆ.

ಭಾನುವಾರಬ್ರಿಜೇಶ್ ಕಾಳಪ್ಪ ಮಾಧ್ಯಮ ಗೋಷ್ಠಿ ನಡೆಸಿ ತೇಜಸ್ವಿ ಸೂರ್ಯ ಗೆಳತಿ ಸೋಮದತ್ತ ಮಾತನಾಡಿರುವ ಆಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ ತೇಜಸ್ವಿ ಸೂರ್ಯ ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ಪ್ರಕರಣ ಸಂಬಂಧ ಟ್ವೀಟ್‌ ಮಾಡಿರುವಸೋಮದತ್ತ ’ರಾಜಕೀಯ ಲಾಭಕ್ಕಾಗಿ ಮಹಿಳೆಯರ ಗೌರವ, ಘನತೆಗೆ ಧಕ್ಕೆ ತರುತ್ತಿರುವ ಬ್ರಿಜೇಶ್ ಕಾಳಪ್ಪಾಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಗೌರವ ಹಾಗೂ ಘನತೆಗೆ ಧಕ್ಕೆ ತಂದಿರುವ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಅವರು ಹೇಳಿದ್ದಾರೆ.

ADVERTISEMENT

‘ಇತ್ತೀಚೆಗೆ ಸಿ.ಡಿ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ತಾನು ಸೇರಿದಂತೆ ಮೂವರು ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದರೆ, ಈ ವಿಷಯವನ್ನು ತೇಜಸ್ವಿ ಬಹಿರಂಗಪಡಿಸಿಲ್ಲ’ ಎಂದು ಬ್ರಿಜೇಶ್‌ ಕಾಳಪ್ಪ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.