ಕೊಲಂಬೊ: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಆಗಸ್ಟ್ 15ರ ಒಳಗೆ ದೇಶ ತೊರೆಯುವಂತೆ ಶ್ರೀಲಂಕಾ ಅಧಿಕಾರಿಗಳು ಬ್ರಿಟಿಷ್ ಮಹಿಳೆಯೊಬ್ಬರಿಗೆ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಶ್ರೀಲಂಕಾ: ಗೊಟಬಯ ಸಿಂಗಪುರದಿಂದ ಥಾಯ್ಲೆಂಡ್ಗೆ?
ಇನ್‌ಸ್ಟಾಗ್ರಾಮರ್, ಬ್ರಿಟಿಷ್ ಮಹಿಳೆ ಕೆಲ್ಲಿ ಫ್ರೇಸರ್ ಅವರು ದೇಶದಲ್ಲಿ ತಂಗಿದ್ದ ಸಂದರ್ಭದಲ್ಲಿ ಯಾವುದೇ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದರೇ ಎಂಬುದನ್ನು ಪರಿಶೀಲಿಸಲು ವಲಸೆ ವಿಭಾಗದ ಅಧಿಕಾರಿಗಳು ಆಗಸ್ಟ್ 2 ರಂದು ಅವರ ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆದಿದ್ದರು ಎಂದು ಡೈಲಿ ಮಿರರ್ ವರದಿ ಮಾಡಿದೆ.
ವೈದ್ಯಕೀಯ ಕಾರಣಗಳಿಗಾಗಿ ಕೆಲ್ಲಿ ಶ್ರೀಲಂಕಾದಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ತನಿಖೆಗಾಗಿ ಏಳು ದಿನಗಳೊಳಗೆ ವಲಸೆ ಇಲಾಖೆಯ ಕಚೇರಿಗೆ ಭೇಟಿ ನೀಡುವಂತೆ ಆಕೆಗೆ ತಿಳಿಸಲಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿರುವ ಕೆಲ್ಲಿ ಫ್ರೇಸರ್, ಇತ್ತೀಚೆಗೆ 'GotaGoHome' ಸಾಮೂಹಿಕ ಪ್ರತಿಭಟನಾ ಅಭಿಯಾನದ ಚಿತ್ರಗಳು ಮತ್ತು ವೀಡಿಯೊಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ತನಿಖೆಯ ನಂತರ, ಇಲಾಖೆಯು ಆಕೆಯ ವೀಸಾ ಅವಧಿಯನ್ನು ಅಂತ್ಯಗೊಳಿಸಿದ್ದು, ಆಗಸ್ಟ್ 15ರ ಒಳಗೆ ದೇಶ ತೊರೆಯುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಈ ವರ್ಷದ ಏಪ್ರಿಲ್‌ನಿಂದ ಶ್ರೀಲಂಕಾ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸಿದೆ.
ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿನ ತಪ್ಪು ನಿರ್ವಹಣೆ ಕಾರಣಕ್ಕೆ ಪ್ರಧಾನಿ ಮಹಿಂದ ರಾಜಪಕ್ಸ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಸ್ಥಾನ ತ್ಯಜಿಸಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.