ADVERTISEMENT

ಕೇಬಲ್ ಆಪರೇಟರ್‌ಗಳಿಗೆ ಸಿಗ್ನಲ್‌ ತಡೆಹಿಡಿದ ಡಿಸ್ನಿ ಸ್ಟಾರ್‌, ಝೀ, ಸೋನಿ

ಪಿಟಿಐ
Published 19 ಫೆಬ್ರುವರಿ 2023, 7:26 IST
Last Updated 19 ಫೆಬ್ರುವರಿ 2023, 7:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: 'ಡಿಸ್ನಿ ಸ್ಟಾರ್', 'ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್' ಮತ್ತು 'ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಲಿಮಿಟೆಡ್' ಸೇರಿದಂತೆ ಪ್ರಮುಖ ವಾಹಿನಿಗಳು ಕೇಬಲ್ ಆಪರೇಟರ್‌ಗಳಿಗೆ ಸಿಗ್ನಲ್‌ ತಡೆ ಹಿಡಿದಿವೆ.

ಹೊಸ ಟ್ಯಾರಿಫ್‌ ಆದೇಶದ ( New Tariff Order– NTO) ಅಡಿಯಲ್ಲಿ, ಪರಿಷ್ಕೃತ ದರದ ಒಪ್ಪಂದಕ್ಕೆ ಸಹಿ ಹಾಕದ ಕಾರಣಕ್ಕೆ ವಾಹಿನಿಗಳು ಈ ನಿರ್ಧಾರಕ್ಕೆ ಬಂದಿವೆ.

‘ಎನ್‌ಟಿಒ ಅಡಿಯಲ್ಲಿ ಪರಿಷ್ಕೃತ ದರವು ಶೇಕಡ 25 ರಿಂದ 35ಕ್ಕೆ ಹೆಚ್ಚಳಗೊಳ್ಳುತ್ತದೆ. ಗ್ರಾಹಕರ ಮೇಲೆ ಹೊರೆ ಬೀಳುತ್ತದೆ’ ಎಂದು ಡಿಜಿಟಲ್ ಕೇಬಲ್ ಟೆಲಿವಿಷನ್ ಆಪರೇಟರ್‌ಗಳ ಸಂಘ ‘ಆಲ್ ಇಂಡಿಯಾ ಡಿಜಿಟಲ್ ಕೇಬಲ್ ಫೆಡರೇಶನ್ (ಎಐಡಿಸಿಎಫ್)’ ಆರೋಪಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.

ADVERTISEMENT

ಪರಿಷ್ಕೃತ ದರಕ್ಕೆ ಸಹಿ ಹಾಕುವಂತೆ ಮನರಂಜನಾ ವಾಹಿನಿಗಳು ಫೆಬ್ರುವರಿ 15 ರಂದು ಕೇಬಲ್ ಆಪರೇಟರ್‌ಗಳು/ಮಲ್ಟಿ ಸಿಸ್ಟಮ್ ಆಪರೇಟರ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದವು.

ಆದರೆ, ಕೇಬಲ್ ಆಪರೇಟರ್‌ಗಳು ನೋಟಿಸ್‌ ಅನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮನರಂಜನಾ ವಾಹಿನಿಗಳು ಸಿಗ್ನಲ್‌ ನಿಲ್ಲಿಸಿವೆ. ವಾಹಿನಿಗಳ ಈ ಕ್ರಮದಿಂದಾಗಿ ದೇಶದಾದ್ಯಂತ ಸುಮಾರು 4.5 ಕೋಟಿ ಕೇಬಲ್ ಟಿವಿ ಕುಟುಂಬಗಳಿಗೆ ಸೇವೆಯಲ್ಲಿ ಅಡಚಣೆಯಾಗಿದೆ.

‘ಮನರಂಜನಾ ವಾಹಿಗಳು ಪ್ರಸ್ತಾಪಿಸಿದ ಪರಿಷ್ಕೃತ ದರದಲ್ಲಿ ವಿಪರೀತ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಶೇ 60ರಷ್ಟು ಹೊರಯಾಗಲಿದೆ’ ಎಂದು ಕೇಬಲ ಟಿ.ವಿ ಆಪರೇಟರ್‌ಗಳು ಹೇಳಿದ್ದಾರೆ.

ಫೆಬ್ರುವರಿಯಲ್ಲಿ ಜಾರಿಗೆ ಬಂದಿರುವ ಎನ್‌ಟಿಒ–3.0ರಲ್ಲಿ ಜನಪ್ರಿಯ ವಾಹಿನಿಗಳ ದರದಲ್ಲಿ ಶೇಕಡ 15 ರಷ್ಟು ಹೆಚ್ಚಳವಾಗಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.