ADVERTISEMENT

ಆರು ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆ: ಬಿಆರ್‌ಎಸ್‌ಗೆ ಮತ್ತೆ ಪೆಟ್ಟು

ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ಗೆ ಮತ್ತೆ ಪೆಟ್ಟು

ಪಿಟಿಐ
Published 5 ಜುಲೈ 2024, 12:55 IST
Last Updated 5 ಜುಲೈ 2024, 12:55 IST
...
...   

ಹೈದರಾಬಾದ್‌: ತೆಲಂಗಾಣದಲ್ಲಿ ವಿರೋಧ ಪಕ್ಷವಾದ ಬಿಆರ್‌ಎಸ್‌ನ ಆರು ಮಂದಿ ವಿಧಾನ ಪರಿಷತ್‌ ಸದಸ್ಯರು (ಎಂಎಲ್‌ಸಿ) ಗುರುವಾರ ರಾತ್ರಿ ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಬಿಆರ್‌ಎಸ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ವಿಧಾನ ಪರಿಷತ್‌ ಸದಸ್ಯರಾದ ದಂಡೆ ವಿಠಲ್‌, ಭಾನುಪ್ರಸಾದ್‌ ರಾವ್‌, ಎಂ.ಎಸ್‌. ಪ್ರಭಾಕರ್‌, ಬೊಗ್ಗರಪು ದಯಾನಂದ್‌, ಯೆಗ್ಗೆ ಮಲ್ಲೇಶಂ ಮತ್ತು ಬಸ್ವರಾಜು ಸಾರಯ್ಯ ಅವರು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾಂಗ್ರೆಸ್‌ನ ತೆಲಂಗಾಣ ಉಸ್ತುವಾರಿ ದೀಪಾ ದಾಸ್‌ಮುನ್ಸಿ ಮತ್ತು ಇತರ ನಾಯಕರು ಈ ವೇಳೆ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ವಿಧಾನ ಪರಿಷತ್‌ನ ವೆಬ್‌ಸೈಟ್‌ ಪ್ರಕಾರ, ಪರಿಷತ್‌ನ ಒಟ್ಟು ಸದಸ್ಯರ ಬಲ 40. ಬಿಆರ್‌ಎಸ್‌ 25 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್‌ 4 ಸ್ಥಾನಗಳನ್ನು ಹೊಂದಿತ್ತು. ಈಗ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ADVERTISEMENT

ಕಳೆದ ವರ್ಷ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್‌ ಸರ್ಕಾರ ರಚಿಸುತ್ತಿದ್ದಂತೆಯೇ, ಬಿಆರ್‌ಎಸ್‌ನ ಆರು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.