ADVERTISEMENT

ಜಮ್ಮು- ಕಾಶ್ಮೀರ: ಪಾಕ್‌ನ ಮತ್ತೊಂದು ಡ್ರೋನ್‌ ಮೇಲೆ ಬಿಎಸ್‌ಎಫ್‌ ಗುಂಡಿನ ದಾಳಿ

ಅಂತರರಾಷ್ಟ್ರೀಯ ಗಡಿ ದಾಟಿ ಭಾರತ ಪ್ರವೇಶಿಸಲು ಯತ್ನಿಸಿದ ಡ್ರೋನ್‌

ಪಿಟಿಐ
Published 2 ಜುಲೈ 2021, 5:56 IST
Last Updated 2 ಜುಲೈ 2021, 5:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಸಮೀಪದಲ್ಲಿರುವ ಅಂತರರಾಷ್ಟ್ರೀಯ ಗಡಿ ದಾಟಿ, ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಶಂಕಿತ ಕಣ್ಗಾವಲು ಡ್ರೋನ್‌ ಮೇಲೆ ಗಡಿಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಶುಕ್ರವಾರ ಗುಂಡು ಹಾರಿಸಿ, ಹಿಮ್ಮೆಟ್ಟಿಸಿರುವುದಾಗಿ ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

‘ನಸುಕಿನ 4.25ರ ಸುಮಾರಿಗೆ ಜಮ್ಮುವಿನ ಹೊರವಲಯದಲ್ಲಿರುವ ಅರ್ನಿಯಾ ಸೆಕ್ಟೆರ್‌ನಲ್ಲಿ ನಮ್ಮ ಸಿಬ್ಬಂದಿ ಡ್ರೋನ್‌ ಅನ್ನು ಪತ್ತೆ ಮಾಡಿದರು. ಭಾರತದ ಗಡಿಯನ್ನು ಪ್ರವೇಶಿಸಲು ಯತ್ನಿಸಿದ ಡ್ರೋನ್ ಮೇಲೆ ಯೋಧರು ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿದ್ದಾರೆ. ನಂತರ, ಡ್ರೋನ್ ಪಾಕಿಸ್ತಾನದ ಕಡೆ ಮರಳಿತು’ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಭಾರತೀಯ ವಾಯುಪಡೆಯ (ಐಎಎಫ್) ವಾಯುನೆಲೆ ಮೇಲೆ ಭಾನುವಾರ ನಡೆದ ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.