ಇಂದೋರ್: ಗಡಿ ಭದ್ರತಾ ಪಡೆಯು ಹೊಸದಾಗಿ ನೇಮಕಾತಿ ಹೊಂದಿದ ಸೈನಿಕರಿಗೆ ಡ್ರೋನ್ ತಂತ್ರಜ್ಞಾನದ ತರಬೇತಿ ನೀಡುತ್ತದೆ ಎಂದು ಬಿಎಸ್‌ಎಫ್‌ನ ಇಂದೋರ್ ಮೂಲದ ಸಹಾಯಕ ತರಬೇತಿ ಕೇಂದ್ರದ ಉನ್ನತ ಅಧಿಕಾರಿ ಗುಲಿಯಾ ತಿಳಿಸಿದ್ದಾರೆ.
ಶತ್ರು ಪಡೆಗಳ, ವಿಶೇಷವಾಗಿ ಪಾಕಿಸ್ತಾನದಿಂದ ಹಾರುವ ಸಾಧನಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಶತ್ರುಗಳ ಪಡೆಯನ್ನು ತಡೆಯಲು ಬಿಎಸ್‌ಎಫ್ ಸೈನಿಕರಿಗೆ ಡ್ರೋನ್ ತಂತ್ರಜ್ಞಾನ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಭಾರತದ ಭೂಪ್ರದೇಶಕ್ಕೆ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಪಾಕಿಸ್ತಾನವು ಡ್ರೋನ್‌ಗಳನ್ನು ಬಳಸುತ್ತಿರುವ ನಿದರ್ಶನಗಳು ಆಗಾಗ್ಗೆ ನಡೆದಿವೆ. ಪಂಜಾಬ್ ಮತ್ತು ಅಂತರರಾಷ್ಟ್ರೀಯ ಗಡಿಯಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ಹಲವಾರು ಪ್ರಕರಣಗಳು ನಡೆದಿದ್ದು, ಬಿಎಸ್‌ಎಫ್ ಪಡೆಗಳು ಡ್ರೋನ್‌ಗಳನ್ನು ಹೊಡೆದುರುಳಿಸಿದೆ’ ಎಂದು ಅವರು ತಿಳಿಸಿದ್ದಾರೆ.
‘ಈ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಎಸ್‌ಟಿಸಿಯು (ಸಹಾಯಕ ತರಬೇತಿ ಕೇಂದ್ರ) ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ 42 ವಾರಗಳ ಡ್ರೋನ್ ತಂತ್ರಜ್ಞಾನ ತರಬೇತಿಯ ಹೊಸ ಕೋರ್ಸ್ ಅನ್ನು ಆರಂಭಿಸಿದೆ. ಇದರ ಮೂಲಕ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿದಾಗ ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಡ್ರೋನ್ ಬೆದರಿಕೆಗಳನ್ನು ಉತ್ತಮ ರೀತಿಯಲ್ಲಿ ಎದುರಿಸಬಹುದು’ ಎಂದು ಗುಲಿಯಾ ಹೇಳಿದ್ದಾರೆ.
ಇಂದೋರ್‌ನ ಸಹಾಯಕ ತರಬೇತಿ ಕೇಂದ್ರವು ಬಿಎಸ್‌ಎಫ್‌ನ ಉನ್ನತ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ.
ಸಹಾಯಕ ತರಬೇತಿ ಕೇಂದ್ರದಲ್ಲಿ (ಎಸ್‌ಟಿಸಿ) ಬಿಎಸ್‌ಎಫ್‌ಗೆ ನೇಮಕಗೊಳ್ಳುವ ಸಿಬ್ಬಂದಿಗಳಿಗದೆ ಕಠಿಣ ವ್ಯಾಯಾಮ, ಶಸ್ತ್ರಾಸ್ತ್ರಗಳ ಬಳಕೆ ಮತ್ತು ನಿರ್ವಹಣೆ, ನಕ್ಷೆ ಓದುವಿಕೆ ಹಾಗೂ ಇತರ ಸಂಬಂಧಿತ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.