ADVERTISEMENT

ಭಾರತ –ಪಾಕಿಸ್ತಾನ ಗಡಿಯಲ್ಲಿ ಎರಡು ಡ್ರೋನ್‌ ಪತ್ತೆ

ಡ್ರೋನ್‌ ವಶಪಡಿಸಿಕೊಂಡಿರುವ ಬಿಎಸ್‌ಎಫ್‌

ಪಿಟಿಐ
Published 27 ಮಾರ್ಚ್ 2024, 14:23 IST
Last Updated 27 ಮಾರ್ಚ್ 2024, 14:23 IST
ಡ್ರೋನ್‌ (ಸಾಂದರ್ಭಿಕ ಚಿತ್ರ) 
ಡ್ರೋನ್‌ (ಸಾಂದರ್ಭಿಕ ಚಿತ್ರ)    

ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್‌ನ ಅಮೃತಸರ ಹಾಗೂ ತರಣ್‌ ತಾರಣ್‌ ಜಿಲ್ಲೆಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಎರಡು ಡ್ರೋನ್‌ಗಳನ್ನು ವಶಪಡಿಸಿಕೊಂಡಿದೆ. 

ಅಮೃತಸರದ ಪಂಜ್‌ಗ್ರೇನ್‌ ಗ್ರಾಮದ ಸಮೀಪದ ಹೊಲದಲ್ಲಿ ಭಾಗಶಃ ಹಾನಿಗೊಳಗಾಗಿದ್ದ ಡ್ರೋನ್‌ವೊಂದನ್ನು ಮಂಗಳವಾರ ಬಿಎಸ್‌ಎಫ್‌ ವಶಪಡಿಸಿಕೊಂಡಿದೆ. ಹೊಲದಲ್ಲಿ ಡ್ರೋನ್‌ ಕಂಡು ರೈತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 

ತರಣ್‌ ತಾರಣ್‌ ಜಿಲ್ಲೆಯ ತೆಕಲನ್‌ ಗ್ರಾಮದ ಸಮೀಪದಲ್ಲಿ ಬುಧವಾರ ಮತ್ತೊಂದು ಡ್ರೋನ್‌ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತೂ ರೈತರೇ ಮಾಹಿತಿ ನೀಡಿದ್ದರು ಎಂದು ಬಿಎಸ್‌ಎಫ್‌ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.