ADVERTISEMENT

ಇಂಡೋ– ಬಾಂಗ್ಲಾ ಗಡಿಯಲ್ಲಿ ಒಳನುಸುಳುತ್ತಿದ್ದವರ ತಡೆದ ಬಿಎಸ್‌ಎಫ್ ಮಹಿಳಾ ಸಿಬ್ಬಂದಿ

ಪಿಟಿಐ
Published 31 ಜುಲೈ 2024, 14:11 IST
Last Updated 31 ಜುಲೈ 2024, 14:11 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೋಲ್ಕತ್ತ: ಇಂಡೋ–ಬಾಂಗ್ಲಾ ಗಡಿಯಲ್ಲಿ ಭದ್ರತೆಗೆ ನಿಂತಿದ್ದ ಬಿಎಸ್‌ಎಫ್‌ ಮಹಿಳಾ ಸಿಬ್ಬಂದಿ ಮೇಲೆ ಬಾಂಗ್ಲಾದೇಶದಿಂದ ಒಳನುಸುಳಲು ಯತ್ನಿಸುವವರ ಗೊಂಪೊಂದು ದಾಳಿ ನಡೆಸಿದೆ. ಮಹಿಳಾ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅರೆಸೇನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ. 

ಬುಧವಾರ ಬೆಳಿಗ್ಗೆ 13–14 ಜನ ಬಾಂಗ್ಲಾದೇಶದ ಗಡಿಯನ್ನು ಅಕ್ರಮವಾಗಿ ದಾಟಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದರು. ಇದನ್ನು ಕಂಡ ಮಹಿಳಾ ಸಿಬ್ಬಂದಿ ಅವರ ಬಳಿ ತೆರಳಿ ಮಾತಿನಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಅವರು ಒತ್ತಾಯಪೂರ್ವಕವಾಗಿ ಒಳಬರಲು ಯತ್ನಿಸಿದರು. ಅವರನ್ನು ತಡೆಯುವ ವೇಳೆ ಸಿಬ್ಬಂದಿ  ಆತ್ಮರಕ್ಷಣೆಗಾಗಿ ಗುಂಡಿ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ತಕ್ಷಣವೇ ಹತ್ತಿರವಿದ್ದ ಸೈನಿಕರು ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಜತೆಗೆ ಒಂದು ಸುತ್ತು ಗುಂಡನ್ನೂ ಹಾರಿಸಿ ಒಳನುಸುಳುವಿಕೆಯನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.