ADVERTISEMENT

ಯಾಕೂಬ್‌ ಖುರೇಷಿಯ ₹31 ಕೋಟಿ ಬೇನಾಮಿ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 21:39 IST
Last Updated 1 ಜನವರಿ 2024, 21:39 IST
<div class="paragraphs"><p>ಯಾಕೂಬ್‌ ಖುರೇಷಿ&nbsp;</p></div>

ಯಾಕೂಬ್‌ ಖುರೇಷಿ 

   

ಚಿತ್ರ ಕೃಪೆ: X/@mauna_adiga

ಮೀರಠ್ (ಉತ್ತರಪ್ರದೇಶ: ಬಿಎಸ್‌ಪಿ ಮುಖಂಡ, ಎರಡು ಬಾರಿಯ ಶಾಸಕ ಯಾಕೂಬ್‌ ಖುರೇಷಿ ಅವರಿಗೆ ಸೇರಿದ ಸುಮಾರು ₹31 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಜಿಲ್ಲಾಡಳಿತವು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶದ ಅನುಸಾರ ಯಾಕೂಬ್ ಖುರೇಷಿ ಅವರ ಬೇನಾಮಿ ಆಸ್ತಿಯನ್ನು ‘ದರೋಡೆಕೋರರ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ಯಡಿ ವಶಪಡಿಸಿಕೊಳ್ಳಲಾಗಿದೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.

ವಶಪಡಿಸಿಕೊಂಡ ಆಸ್ತಿಗಳಲ್ಲಿ ನೌಚಂಡಿಯ ಭವಾನಿ ನಗರದಲ್ಲಿನ ಆಸ್ಪತ್ರೆ ಕಟ್ಟಡ ಮತ್ತು ಖುರೇಷಿ ತನ್ನ ಕುಟುಂಬ ಸದಸ್ಯರು ಮತ್ತು ಉದ್ಯೋಗಿಗಳ ಹೆಸರಿನಲ್ಲಿ ಖರೀದಿಸಿದ್ದ ಎರಡು ಐಷಾರಾಮಿ ಕಾರುಗಳು, ಶಾಸ್ತ್ರಿನಗರದಲ್ಲಿರುವ 3,265.35 ಚದರ ಮೀಟರ್, 288 ಚದರ ಮೀಟರ್ ಮತ್ತು 213.60 ಚದರ ಮೀಟರ್ ಅಳತೆಯ ಮೂರು ಫ್ಲ್ಯಾಟ್‌ಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಮೀರಠ್‌ನಲ್ಲಿ ಖುರೇಷಿ ಅವರಿಗೆ ಸೇರಿದ ಮಾಂಸದ ಕಾರ್ಖಾನೆಯ ಮೇಲೆ 2022ರ ಮಾರ್ಚ್‌ 31ರಂದು ಪೊಲೀಸರು ದಾಳಿ ನಡೆಸಿದ್ದರು. ಕಾರ್ಖಾನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮಾಂಸದ ಪ್ಯಾಕಿಂಗ್ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿತ್ತು. ಕಾರ್ಖಾನೆಯ 10 ಮಂದಿ ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಖುರೇಷಿ ಮತ್ತು ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಸಜ್ವಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.