ನವದೆಹಲಿ:₹5 ಲಕ್ಷಕ್ಕಿಂತ ಕಡಿಮೆ ಗಳಿಕೆ ಹೊಂದಿದವರಿಗೆ ಆದಾಯ ತೆರಿಗೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದರು.
ಜವಾಬ್ದಾರಿಯುತವಾಗಿ ತೆರಿಗೆ ಪಾವತಿದಾರರಿಗೆ ಧನ್ಯವಾದ ಸಲ್ಲಿಸಿದ ನಿರ್ಮಲಾ, ತೆರಿಗೆದಾರರೇ ದೇಶದ ಪ್ರಾಮಾಣಿಕರು ಎಂದು ಬಣ್ಣಿಸಿದರು.
* ತಮಿಳು ಸಂಗಂ ‘ಯಾನೈ ಪುಗುಂದ ನಿಲಂ’ ವಾಕ್ಯ ಹಾಗೂ ಪಾಂಡ್ಯ ರಾಜನ ಉಲ್ಲೇಖಿಸಿದ ನಿರ್ಮಲಾ, ಆನೆಗೆ ಆಹಾರಕ್ಕೆ ಬೇಕಿರುವುದು ಸಣ್ಣ ಜಮೀನಲ್ಲಿ ಬೆಳೆಯಬಹುದಾದ ಭತ್ತ. ಆದರೆ, ಅದು ಸೇವಿಸುವುದು ಕೆಲ ಪ್ರಮಾಣ ಆದರೂ, ಅದು ಇಡುವ ಹೆಜ್ಜೆಗಳಿಂದ ಹೆಚ್ಚಿನ ಹಾನಿಯಾಗುತ್ತದೆ ಎಂದು ವಿವರಿಸಿದರು.
* ಆದಾಯ ತೆರಿಗೆ ಪಾವತಿ ಹೆಚ್ಚಳವಾಗಿದೆ.
* ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗಿದೆ.
* ತೆರಿಗೆ ಪಾವತಿಗೆ ಮುಖಾಮುಖಿ ಸಲ್ಲಿಕೆ ಕಡ್ಡಾಯವಲ್ಲ. ಆನ್‌ಲೈನ್‌ನಲ್ಲಿ ಸಲ್ಲಿಸಿದರೆ ಸಾಕು.
* ಜಿಎಸ್‌ಟಿಯಿಂದ 17 ತೆರಿಗೆ ಮತ್ತು 30 ನೀತಿಗಳು ರದ್ದಾಗಿವೆ
* ನೇರ ತೆರಿಗೆ ₹11 ಲಕ್ಷಕ್ಕೆ ಏರಿಕೆಯಾಗಿದೆ. ತೆರಿಗೆ ಸಂಗ್ರಹದಲ್ಲಿ ಶೇ78ರಷ್ಟು ಏರಿಕೆಯಾಗಿದೆ.
* ಜನರ ಮೇಲೆ ತರಿಗೆ ಹೊರ ಹೋರಿಸಲು ಬಯಸುವುದಿಲ್ಲ.
* ವಾರ್ಷಿಕ 400 ಕೋಟಿ ಆದಾಯ ಹೊಂದಿದ ಉದ್ಯಮಕ್ಕೆ ಶೇ25ರಷ್ಟು ತೆರಿಗೆ
* ಎಲೆಕ್ಟ್ರಿಕ್ ವಾಹನಗಳ ತರಯಾರಿಕೆ ಉದ್ದಿಮೆಗಳಿಗೆ ಶೇ 5ರಷ್ಟು ಜಿಎಸ್‌ಟಿ ಇಳಿಕೆ
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.