ADVERTISEMENT

Budget 2024 | ನೀಲಿ ಬಣ್ಣದ ಸೀರೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2024, 5:38 IST
Last Updated 1 ಫೆಬ್ರುವರಿ 2024, 5:38 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 6ನೇ ಬಜೆಟ್ ಮಂಡಿಸಲಿದ್ದು, ನೀಲಿ ಹಾಗೂ ಅಫ್‌ ವೈಟ್‌ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ನೀಲಿ ಬಣ್ಣದ ಸೀರೆಯ ಮೇಲೆ ಅಫ್‌ ವೈಟ್‌ ಬಣ್ಣದಲ್ಲಿ ಕೆತ್ತಲಾಗಿರುವ ಎಲೆಗಳ ಡಿಸೈನ್‌ ಇದೆ.

ADVERTISEMENT

ನಿರ್ಮಲಾ ಅವರು ತಮ್ಮ 5ನೇ ಬಜೆಟ್ ಮಂಡನೆಯ ವೇಳೆ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಸೀರೆಯುಟ್ಟು ಬಂದಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.

ಬಜೆಟ್‌ ವೇಳೆ ನಿರ್ಮಲಾ ಸೀತಾರಾಮನ್ ಧರಿಸಿದ್ದ ಸೀರೆಗಳು

2019–2022ರ ಬಜೆಟ್‌ ವೇಳೆ ನಿರ್ಮಲಾ ಸೀತಾರಾಮನ್ ಧರಿಸಿದ್ದ ಸೀರೆಗಳು:

2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆಯುಟ್ಟು ಮಿಂಚಿದ್ದರು.

2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆ ಧರಿಸಿದ್ದರು.

2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.

2019ರಲ್ಲಿ ಗೋಲ್ಡನ್‌ ಬಾರ್ಡರ್‌ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯಟ್ಟು ಮಿಂಚಿದ್ದರು.

ಈ ಹಿಂದೆ ಆರು ಬಾರಿ ಬಜೆಟ್‌ ಮಂಡಿಸಿರುವ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸೀತಾರಾಮನ್ ಸರಿಗಟ್ಟಲಿದ್ದಾರೆ.

ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಪ್ರಕಟಿಸುವುದಿಲ್ಲ ಎಂದು ಈಗಾಗಲೇ ಅವರು ಹೇಳಿದ್ದಾರೆ. ಹಾಗಾಗಿ, ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಡಿ ತೆರಿಗೆದಾರರಿಗೆ ಯಾವುದೇ ವಿನಾಯಿತಿ ಪ್ರಕಟಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.