ADVERTISEMENT

ಉಭಯ ಸದನಗಳಲ್ಲಿ ಗದ್ದಲ: ಸ್ಪೀಕರ್‌ ಕುರ್ಚಿ ಬಳಿ ಕಾಗದ ಎಸೆದ ಕಾಂಗ್ರೆಸ್‌ ಸದಸ್ಯರು

ಕಪ್ಪು ದಿರಿಸು ತೊಟ್ಟು ಕಲಾಪದಕ್ಕೆ ಬಂದ ವಿರೋಧ ಪಕ್ಷಗಳ ಸದಸ್ಯರು 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2023, 6:34 IST
Last Updated 27 ಮಾರ್ಚ್ 2023, 6:34 IST
   

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಸೋಮವಾರವೂ ಮುಂದುವರಿದಿದ್ದು, ಬಜೆಟ್‌ ಅಧಿವೇಶನಕ್ಕೆ ಅಡ್ಡಿಯಾಗಿದೆ. ಉಭಯದ ಸದನಗಳ ಕಲಾಪವನ್ನು ಮುಂದೂಡಲಾಗಿದೆ.

ಅದಾನಿ ಹಾಗೂ ರಾಹುಲ್‌ ಗಾಂಧಿ ಅವರ ಅನರ್ಹತೆ ಸಂಬಂಧ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಪರಿಣಾಮ ಕಲಾಪ ನಡೆಸಲಾಗದೆ ಲೋಕಸಭೆ ಕಲಾಪವನ್ನು ಸಂಜೆ 4 ಗಂಟೆಗೆ ಹಾಗೂ ರಾಜ್ಯಸಭೆ ಕಲಾ‍‍ಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ದಿನದ ಕಲಾಪ ಆರಂಭವಾದ ಕೂಡಲೇ ಕಪ್ಪು ಅಂಗಿ, ಪಟ್ಟಿ, ಶಾಲು ಧರಿಸಿದ್ದ ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್‌ ಸದಸ್ಯರಾದ ಟಿ.ಎನ್‌ ಪ್ರತಾಪನ್‌ ಹಾಗೂ ಹಿಬಿ ಇಡೆನ್‌ ಅವರು, ಆದೇಶ ಪತ್ರಗಳನ್ನು ಹಾಗೂ ಕಪ್ಪು ಪಟ್ಟಿಯನ್ನು ಸ್ಪೀಕರ್‌ ಕುರ್ಚಿಯ ಬಳಿ ತೂರಿದರು.

ADVERTISEMENT

‘ನಾನು ಘನತೆಯಿಂದ ಸಂಸತ್‌ ಕಲಾಪವನ್ನು ನಡೆಸಬೇಕು‘ ಎಂದು ಹೇಳಿದ ಸ್ಪೀಕರ್‌ ಓಂ ಬಿರ್ಲಾ ಲೋಸಕಭೆ ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.