ADVERTISEMENT

ಶಾಲೆ, ವಿವಿಗಳ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ: ಬುಲ್ಲಿ ಬಾಯಿ ಆರೋಪಿ ಹೇಳಿಕೆ

ಪಿಟಿಐ
Published 8 ಜನವರಿ 2022, 19:30 IST
Last Updated 8 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ನನಗೆ ಭಾರತ ಹಾಗೂ ಪಾಕಿಸ್ತಾನದ ಶಾಲೆ–ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ, ವಿರೂಪಗೊಳಿಸುವ ಅಭ್ಯಾಸವಿತ್ತು’ ಎಂದು ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣದ ಮುಖ್ಯ ಆರೋಪಿ ನೀರಜ್ ಬಿಷ್ಣೋಯಿ ಹೇಳಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.‘

‘ವಿಚಾರಣೆ ವೇಳೆ ನೀರಜ್‌ ಈ ವಿಷಯ ತಿಳಿಸಿದ್ದಾನೆ. ಅಲ್ಲದೇ, ಸುಲ್ಲಿ ಡೀಲ್ಸ್‌ ಆ್ಯಪ್‌ನ ಟ್ವಿಟ್ಟರ್‌ ಹ್ಯಾಂಡಲ್‌ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯೊಂದಿಗೂ ಸಂಪರ್ಕ ಹೊಂದಿದ್ದೆ ಎಂಬುದಾಗಿ ಬಹಿರಂಗಪಡಿಸಿದ್ದಾನೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ಸುಲ್ಲಿ ಡೀಲ್ಸ್‌ ಆ್ಯಪ್‌ಅನ್ನು ಅಭಿವೃದ್ಧಿಪಡಿಸಿರುವ ವ್ಯಕ್ತಿಯ ಪತ್ತೆ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತಾಂತ್ರಿಕ ವಿಶ್ಲೇಷಣೆ, ವಿಧಿವಿಜ್ಞಾನ ಪರಿಶೀಲನೆಯನ್ನೂ ಕೈಗೊಳ್ಳಲಾಗಿದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.