ನವದೆಹಲಿ: ಬುರಾರಿ ಕುಟುಂಬದ 11 ಜನರ ನಿಗೂಢ ಸಾವಿನ ಕುರಿತು ಮನೋವೈಜ್ಞಾನಿಕ ಪರೀಕ್ಷೆ ನಡೆಸಿಕೊಡುವಂತೆ ಪೊಲೀಸರು ಸಿಬಿಐಗೆ ಕೋರಿದ್ದಾರೆ.
ಸಿಬಿಐನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ಮನಶಾಸ್ತ್ರಜ್ಞರ ತಂಡವೊಂದನ್ನು ರಚಿಸಿ ಅವರಿಂದ ಈ ಪರೀಕ್ಷೆ ನಡೆಸಿಕೊಡುವಂತೆ ಕೇಳಿದ್ದಾರೆ.
‘ಮೃತರ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ನಡೆಸುವ ಜತೆಗೆ ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರ ಸಂದರ್ಶನ ನಡೆಸುವ ಮೂಲಕ ಸಾಯುವ ಮುನ್ನ ಅವರ ಮಾನಸ್ಥಿತಿ ಹೇಗಿತ್ತು ಎಂಬುದನ್ನು ತಜ್ಞರು ವಿಶ್ಲೇಷಿಸಲಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿಯ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಜುಲೈ 1ರಂದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.