ADVERTISEMENT

ನೀಟ್‌; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್‌ ಕಾಲೇಜು ಪ್ರಾಂಶುಪಾಲ

ಪಿಟಿಐ
Published 19 ಜುಲೈ 2022, 14:18 IST
Last Updated 19 ಜುಲೈ 2022, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಶಿಮ್‌ (ಮಹಾರಾಷ್ಟ್ರ): ನೀಟ್‌ ಪರೀಕ್ಷೆಗೆ ಹಾಜರಾಗುವಾಗ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಕಾ ಮತ್ತು ಹಿಜಾಬ್‌ ಧರಿಸಲು ಪೂರ್ವ ಅನುಮತಿ ಪಡೆಯಬೇಕಿತ್ತು ಎಂದು ವಾಶಿಮ್‌ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.

ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯ ಮಾತೋಶ್ರೀ ಶಾಂತಬಾಯಿ ಗೋಟೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ಹಿಜಾಬ್‌ ತೆಗೆಯಬೇಕೆಂದು ಸೂಚಿಸಿದ ವಿಚಾರಕ್ಕೆ ಸಂಬಂಧಿಸಿ ವಿವಾದವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲ ಜಿ.ಎಸ್‌. ಕುಬ್ಡೆ ಅವರು, ಕೇವಲ ಓರ್ವ ವಿದ್ಯಾರ್ಥಿನಿಯ ಪೋಷಕರು ಇದನ್ನು ವಿವಾದವನ್ನಾಗಿಸಿದ್ದಾರೆ ಎಂದು ದೂರಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಮೊದಲು ಐವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬುರ್ಕಾ ಮತ್ತು ಹಿಜಾಬ್‌ ತೆಗೆಯುವಂತೆ ಸೂಚಿಸಲಾಗಿತ್ತು. ಬಳಿಕ ಅಧಿಕಾರಿಗಳ ಜೊತೆ ಮಾತನಾಡಿ ಸಮ್ಮತಿ ನೀಡಲಾಗಿದೆ. ಐವರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ಆರಂಭಗೊಳ್ಳುವ 2 ಗಂಟೆ ಮೊದಲು ಪರೀಕ್ಷಾ ಕೇಂದ್ರದ ಮುಖ್ಯಸ್ಥರಲ್ಲಿ ಬುರ್ಕಾ ಮತ್ತು ಹಿಜಾಬ್‌ ಧರಿಸಲು ಅನುಮತಿಯನ್ನು ಕೇಳಬೇಕಿತ್ತು ಎಂದು ಜಿ.ಎಸ್‌. ಕುಬ್ಡೆ ತಿಳಿಸಿದ್ದಾರೆ.

ADVERTISEMENT

ಓರ್ವ ವಿದ್ಯಾರ್ಥಿನಿ ಬುರ್ಕಾವನ್ನು ತನ್ನ ತಂದೆಗೆ ಕೊಟ್ಟು ಬರಲು ಹೊರಗೆ ಹೋಗಿದ್ದಳು. ಇದರಿಂದಾಗಿ ವಿವಾದ ಹೊರಗಡೆ ಹೋಗಿದೆ ಎಂದು ದೂರಿದ್ದಾರೆ.

ಬುರ್ಕಾ ತೆಗೆಯದಿದ್ದರೆ ಕತ್ತರಿಸಿ ಹಾಕುವುದಾಗಿ ಕಾಲೇಜಿನ ಸಿಬ್ಬಂದಿ ಬೆದರಿಕೆ ಒಡ್ಡಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿನಿಯರು ಸೋಮವಾರ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

ಕೇರಳದ ತಿರುವನಂತಪುರದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಒಳ ಉಡುಪು ತೆಗೆದು ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.