ಸಿವನಿ, ಮಧ್ಯಪ್ರದೇಶ: ವಿಶೇಷ ಸೇನಾಪಡೆಯ (ಎಸ್‌ಎಎಫ್) ಯೋಧರಿದ್ದ ಬಸ್ ಮತ್ತು ಕಾರಿನ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, 26 ಯೋಧರು ಗಾಯಗೊಂಡರು.
ಸಿವನಿ–ಮಂಡಲಾ ರಾಜ್ಯ ಹೆದ್ದಾರಿಯಲ್ಲಿ ಧನಗಢ ಬಳಿ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಯೋಧರೊಬ್ಬರನ್ನು ಸಮೀಪದ, ಮಹಾರಾಷ್ಟ್ರದ ನಾಗ್ಪುರದಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಎಸ್‌ಎಎಫ್‌ನ 35ನೇ ಬೆಟಾಲಿಯನ್‌ಗೆ ಸೇರಿದ ಬಸ್ ಮಂಡಲಾದಿಂದ ಪಾಂಢುರಣಾಗೆ ತೆರಳುತ್ತಿತ್ತು. ಕಾರಿನಲ್ಲಿದ್ದ, ಮಂಡಲಾ ನಿವಾಸಿಗಳಾದ ಮೂವರು ಮೃತಪಟ್ಟರು. ಅಪಘಾತದಲ್ಲಿ ಬಸ್ ಮುಗುಚಿ, 26 ಯೋಧರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.