ADVERTISEMENT

ಚೆನ್ನೈ ಬಸ್‌ ಡೇ:ಬಸ್ ಮೇಲೇರಿ ಕುಳಿತ ವಿದ್ಯಾರ್ಥಿಗಳು ಬೀಳುತ್ತಿರುವ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 16:29 IST
Last Updated 19 ಜೂನ್ 2019, 16:29 IST
   

ಚೆನ್ನೈ: ಚೆನ್ನೈ ಮಹಾನಗರ ಸಾರಿಗೆ ಕಾರ್ಪೊರೇಷನ್ (ಎಂಟಿಸಿ) ಬಸ್ ದಿನ ಆಚರಣೆ ವೇಳೆ ಬಸ್ ಮೇಲೇರಿ ಕುಳಿತ ವಿದ್ಯಾರ್ಥಿಗಳು ಬಸ್ ಬ್ರೇಕ್ ಹಾಕಿದಾಗ ದೊಪ್ಪನೆ ಕೆಳಗುರುಳಿ ಬೀಳುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೋಮವಾರ ಇಲ್ಲಿ ಬಸ್ ದಿನಾಚರಣೆ ನಡೆದಿತ್ತು. ಇದರ ಸಲುವಾಗಿ ಆವಡಿಯಿಂದ ಅಣ್ಣಾ ಸ್ಕ್ವೇರ್‌ಗೆ ಹೋಗುತ್ತಿರುವ 27ಎಚ್ ಬಸ್‌ನಲ್ಲಿ ವಿದ್ಯಾರ್ಥಿಗಳು ಬಸ್ಸೇರಿದ್ದಾರೆ. ಕೆಲವರು ಬಸ್ಸಿನ ಬಾಗಿಲಿನಲ್ಲಿ ನಿಂತು ನೇತಾಡಿಕೊಂಡಿದ್ದರೆ ಇನ್ನೊಂದಷ್ಟು ವಿದ್ಯಾರ್ಥಿಗಳ ಗುಂಪು ಬಸ್‌ನ ಮೇಲೇರಿ ಕುಳಿತಿತ್ತು.
ಅಧಿಕ ಸಂಖ್ಯೆಯಲ್ಲಿವಿದ್ಯಾರ್ಥಿಗಳನ್ನು ಹೊತ್ತು ನಿಧಾನವಾಗಿ ಸಾಗುತ್ತಿದ್ದ ಬಸ್ ಥಟ್ಟನೆ ಬ್ರೇಕ್ ಹಾಕಿದಾಗ ಬಸ್ ಮೇಲೆ ಕುಳಿತ ವಿದ್ಯಾರ್ಥಿಗಳು ಕೆಳಗುರುಳಿ ಬಿದ್ದಿದ್ದಾರೆ. ಬಸ್ ಮುಂದೆ ಸಾಗುತ್ತಿದ್ದ ಬೈಕ್ ಸವಾರರ ಮೇಲೂ ಕೆಲವರು ಬಿದ್ದಿದ್ದು ಯಾರಿಗೂ ಗಂಭೀರ ಗಾಯಗಳೇನೂ ಆಗಿಲ್ಲ.

ವಿದ್ಯಾರ್ಥಿಗಳು ಬಸ್ ಮೇಲೇರಿ ಕುಳಿತು ಬರುತ್ತಿರುವ ದೃಶ್ಯದಿಂದ ಹಿಡಿದು ಅವರು ಬೀಳುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.ಈ ಘಟನೆಗೆ ಸಂಬಂಧಿಸಿದಂತೆಪಚ್ಚೈಯಪ್ಪಾಸ್ ಕಾಲೇಜಿನ 17 ವಿದ್ಯಾರ್ಥಿಗಳನ್ನು ಕಿಲ್ಪುಕ್ ಪೊಲೀಸರು ಬಂಧಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.