ಲಖನೌ: ಜೈಲಿನಲ್ಲಿರುವ ಪಾತಕಿ ಅತೀಕ್ ಅಹ್ಮದ್ ಹಾಗೂ ಆತನ ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿ, ₹40 ಕೋಟಿ ಮೌಲ್ಯದ ಆಸ್ತಿಯನ್ನು ಒತ್ತಾಯಪೂರ್ವಕವಾಗಿ ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಉದ್ಯಮಿ ಮೋಹಿತ್ ಜೈಸ್ವಾಲ್ ಅವರು ಆರೋಪಿಸಿದ್ದಾರೆ.
ಅತೀಕ್ ಪುತ್ರ ಉಮರ್ ಹಾಗೂ ಅವರ ಗುಂಪಿನ 15 ಸದಸ್ಯರು ಕಳೆದ ವಾರ ತಮ್ಮನ್ನು ಅಪಹರಿಸಿ, 300 ಕಿ.ಮೀ ದೂರದ ದೇವರಿಯಾ ಜೈಲಿಗೆ ಕರೆದೊಯ್ದು, ಅಲ್ಲಿನ ಕೋಣೆಯೊಂದರಲ್ಲಿ ಥಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜೈಸ್ವಾಲ್ ಅವರ ದೂರಿನ ಮೇರೆಗೆ ಅತೀಕ್, ಆತನ ಪುತ್ರ ಉಮರ್, ಸಹಚರರಾದ ಫಾರೂಕ್, ಖಾಕಿ ಅಹ್ಮದ್, ಜಾಫರ್ ಉಲ್ಲಾ, ಗುಲಾಮ್ ಸರ್ವರ್ ಹಾಗೂ 10 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಹತ್ಯೆ ಯತ್ನ, ಅಪಹರಣ ಸೇರಿದಂತೆ ವಿವಿಧ ಸೆಕ್ಷನ್ ಅಡಿ ಲಖನೌದ ಕೃಷ್ಣಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಿದ್ದೇನು:
‘ಅತೀಕ್ ಸಹಚರನೊಬ್ಬ ಜೈಸ್ವಾಲ್ ಅವರನ್ನು ಅವರ ಎಸ್‌ಯುವಿನಲ್ಲೇ ದೇವರಿಯಾ ಜೈಲಿಗೆ ಡಿಸೆಂಬರ್ 26ರಂದು ಕರೆದೊಯ್ದಿದ್ದಾನೆ. ಅತೀಕ್‌ನನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲೇ ಉದ್ಯಮಿಯನ್ನು ಥಳಿಸಲಾಗಿದೆ’ ಎಂದು ಕೃಷ್ಣಾ ನಗರ ವೃತ್ತ ನಿರೀಕ್ಷಕ ಲಾಲ್‌ಪ್ರತಾಪ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.