ADVERTISEMENT

ಕೇರಳದ ಪುದುಪಳ್ಳಿಯಲ್ಲಿ ಮಾಜಿ ಸಿಎಂ ಉಮ್ಮನ್ ಚಾಂಡಿ ಪುತ್ರನಿಗೆ ಗೆಲುವು

ಪಿಟಿಐ
Published 8 ಸೆಪ್ಟೆಂಬರ್ 2023, 9:52 IST
Last Updated 8 ಸೆಪ್ಟೆಂಬರ್ 2023, 9:52 IST
<div class="paragraphs"><p>ಚಾಂಡಿ ಉಮ್ಮನ್</p></div>

ಚಾಂಡಿ ಉಮ್ಮನ್

   

– ಪಿಟಿಐ ಚಿತ್ರ

ಕೊಟ್ಟಾಯಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನದಿಂದ ತೆರವಾಗಿದ್ದ ಪುದುಪಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಚಾಂಡಿ ಉಮ್ಮನ್ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ವಿರೋಧ ಪಕ್ಷ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ ಕ್ಷೇತ್ರವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ.

ADVERTISEMENT

ರಾಜ್ಯದಲ್ಲಿ ಎಡ ಪಕ್ಷಗಳ ನೇತೃತ್ವದ ಸರ್ಕಾರದ ಕೆಟ್ಟ ಆಡಳಿತದ ವಿರುದ್ಧ ಸಿಕ್ಕ ಗೆಲುವು ಇದು ಎಂದು ಚಾಂಡಿ ಉಮ್ಮನ್ ಹೇಳಿದ್ದಾರೆ.

ಮತ ಎಣಿಕೆ ನಡೆದ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿಕೊಂಡು ಬಂದ ಚಾಂಡಿ ಉಮ್ಮನ್, ಎದುರಾಳಿ ಎಲ್‌ಡಿಎಫ್‌ನ ಜಾಕ್‌ ಸಿ ಥೋಮಸ್‌ ವಿರುದ್ಧ 33,255 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯ ಲಿಜಿನ್‌ಲಾಲ್‌ 6,558 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದರು.

ಚಾಂಡಿ ಉಮ್ಮನ್‌ ಅವರಿಗೆ 80,144 ಮತಗಳು ಲಭಿಸಿದರೆ, ಥೋಮಸ್‌ ಅವರಿಗೆ 42,425 ಮತಗಳು ಸಿಕ್ಕವು.

37 ವರ್ಷದ ಚಾಂಡಿ ಉಮ್ಮನ್‌ ಸದ್ಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಔಟ್‌ರೀಚ್‌ ಸೆಲ್‌ನ ಮುಖ್ಯಸ್ಥರಾಗಿದ್ದಾರೆ. ಪುದುಪಳ್ಳಿ ಕ್ಷೇತ್ರವನ್ನು ಅವರ ತಂದೆ ಕಳೆದ 5 ದಶಕಗಳಿಂತಲೂ ಅಧಿಕ ಕಾಲ ಪ್ರತಿನಿಧಿಸುತ್ತಿದ್ದರು.

ಸೆ. 5ಕ್ಕೆ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ಈ ಸೋಲು ಆಡಳಿತಾರೂಢ ಎಲ್‌ಡಿಎಫ್‌ಗೆ 2024ರ ಲೋಕಸಭೆಗೂ ಮುನ್ನ ಉಂಟಾದ ಬಹುದೊಡ್ಡ ಹಿನ್ನಡೆಯಾಗಿದೆ. ಸರ್ಕಾರದ ವಿರುದ್ಧ ಯುಡಿಎಫ್‌ ಹಾಗೂ ಬಿಜೆಪಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಆರೋ‍ಪಗಳನ್ನು ಹೊರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.