ADVERTISEMENT

ಭಾರತೀಯ ವೈದ್ಯಕ್ಕೆ ರಾಷ್ಟ್ರೀಯ ಆಯೋಗ

ಪಿಟಿಐ
Published 28 ಡಿಸೆಂಬರ್ 2018, 15:35 IST
Last Updated 28 ಡಿಸೆಂಬರ್ 2018, 15:35 IST

ಭಾರತೀಯ ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗದ ಕರಡು ನಿಯಮಾವಳಿಗಳಿಗೆ ಕೇಂದ್ರ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.ಈಗ ಚಾಲ್ತಿಯಲ್ಲಿರುವ ಭಾರತೀಯ ವೈದ್ಯ ಮಂಡಳಿಯ ಬದಲಿಗೆ ಈ ಆಯೋಗವು ಅಸ್ತಿತ್ವಕ್ಕೆ ಬರಲಿದೆ.

ನಾಲ್ಕು ಸ್ವಾಯತ್ತ ಮಂಡಳಿಗಳು

ಈ ಆಯೋಗದ ಅಡಿ ಬರುವ ವಿವಿಧ ವೈದ್ಯ ಪದ್ಧತಿಗಳಿಗೆ ನಾಲ್ಕು ಪ್ರತ್ಯೇಕ ಸ್ವಾಯತ್ತ ಮಂಡಳಿಗಳ ರಚನೆಗೆ ಅವಕಾಶವಿದೆ. ಸಂಬಂಧಿತ ಪದ್ಧತಿಯಲ್ಲಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಗಳನ್ನು ನಡೆಸುವ, ಶಿಕ್ಷಕರ ಅರ್ಹತಾ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಆಯಾ ಮಂಡಳಿಯದ್ದಾಗಿರುತ್ತದೆ.

ADVERTISEMENT

ಆಯುರ್ವೇದ

ಯುನಾನಿ

ಸಿದ್ಧ

ಸೋವಾ ರಿಗ್ಪಾ

**

ಪೋಕ್ಸೊಗೆ ತಿದ್ದುಪಡಿ

ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ (ಪೋಕ್ಸೊ) ಕಾಯ್ದೆಗೆ ತಿದ್ದುಪಡಿ ತರಲು ಸಂಪುಟವು ಒಪ್ಪಿದೆ.ಮಕ್ಕಳನ್ನು ಒಳಗೊಂಡಿರುವ ಲೈಂಗಿಕ ಚಿತ್ರಗಳ ಹಂಚಿಕೆ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶ ನೀಡುವ ತಿದ್ದುಪಡಿ ತರಲಾಗುತ್ತದೆ. ಲೈಂಗಿಕ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ, ಸೂಕ್ತ ವಯಸ್ಸಿಗೂ ಮೊದಲೇ ಋತುಮತಿಯಾಗುವಂತೆ ಬಾಲಕಿಯರಿಗೆ ಹಾರ್ಮೋನ್ ಚುಚ್ಚುಮದ್ದು ನೀಡುವುವರ ವಿರುದ್ಧವೂ ಕಠಿಣ ಕ್ರಮಕ್ಕೆ ಈ ತಿದ್ದುಪಡಿ ಅವಕಾಶ ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.