ನವದೆಹಲಿ: ಬಿತ್ತನೆ ಅವಧಿಯಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಂಗಳವಾರ ಫಾಸ್ಫಟಿಕ್ ಮತ್ತು ಪೊಟ್ಯಾಶ್ (ಪಿ ಅಂಡ್ ಕೆ) ರಸಗೊಬ್ಬರಗಳಿಗೆ ₹28,655 ಕೋಟಿ ನಿವ್ವಳ ಸಹಾಯಧನ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) 2021ರ ಅಕ್ಟೋಬರ್ ನಿಂದ 2022ರ ಮಾರ್ಚ್‌ವರೆಗೆ ಫಾಸ್ಫಟಿಕ್ ಮತ್ತು ಪೊಟ್ಯಾಶ್ ರಸಗೊಬ್ಬರಗಳಿಗೆ ಸಬ್ಸಿಡಿ (ಎನ್‌ಬಿಎಸ್) ನೀಡಲಾಗುತ್ತದೆ.
ಹೆಚ್ಚುವರಿ ಸಬ್ಸಿಡಿಯು 2021-22ರ ರಬಿ ಋತುವಿನಲ್ಲಿ ರೈತರಿಗೆ ಎಲ್ಲ ಪಿ ಮತ್ತು ಕೆ ರಸಗೊಬ್ಬರಗಳು ಕೈಗೆಟುಕುವ ದರದಲ್ಲಿ ಸರಾಗವಾಗಿ ಲಭಿಸುವಂತೆ ಮಾಡಲು ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. 2021-22ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ ಸುಮಾರು ₹79,600 ಕೋಟಿ ನಿಗದಿಪಡಿಸಲಾಗಿದೆ. ಹೆಚ್ಚುವರಿ ಸಬ್ಸಿಡಿ ಒದಗಿಸಿದ ನಂತರ ಈ ಅಂಕಿಅಂಶ ಏರಿಕೆಯಾಗಬಹುದು ಎಂದು ಸರ್ಕಾರ ಮಂಗಳವಾರ ಹೇಳಿದೆ.
ಸರ್ಕಾರಿ ಮತ್ತು ಖಾಸಗಿ ವಲಯದ 100 ಶಾಲೆಗಳನ್ನು ಸೈನಿಕ್ ಸ್ಕೂಲ್ ಸೊಸೈಟಿಯೊಂದಿಗೆ ಸಂಯೋಜಿಸುವ ಪ್ರಸ್ತಾವನೆಗೂ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಸ್ವಚ್ಛ ಭಾರತ ಮಿಷನ್ (ನಗರ) ಅನ್ನು 2025–26ರವರೆಗೆ ಮುಂದುವರಿಸಲು ಸಂಪುಟ ಒಪ್ಪಿಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.