ನವದೆಹಲಿ: ಕೇಂದ್ರ ಸರ್ಕಾರದ ಒಟ್ಟು 30.67 ಲಕ್ಷ ನೌಕರರಿಗೆ ಒಟ್ಟು ₹ 3,737 ಕೋಟಿ ಬೋನಸ್ ಸಿಗಲಿದೆ. ಹಬ್ಬಗಳ ಸಂದರ್ಭದಲ್ಲಿ ನೌಕರರು ಹಣ ಖರ್ಚು ಮಾಡುವುದನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಈ ತೀರ್ಮಾನ ಕೈಗೊಂಡಿದೆ.
2019–20ನೇ ಸಾಲಿನ ಉತ್ಪಾದಕತೆಗೆ ಸಂಬಂಧಿಸಿದ ಬೋನಸ್ ಹಾಗೂ ಉತ್ಪಾದಕತೆಗೆ ಸಂಬಂಧಿಸಿರದ ಬೋನಸ್ ಹಣವು ಮಧ್ಯಮ ವರ್ಗಕ್ಕೆ ಖರ್ಚು ಮಾಡುವುದಕ್ಕೆ ಉತ್ತೇಜನ ನೀಡುತ್ತದೆ. ಅದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವಂತೆ ಆಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸಂಪುಟ ಸಭೆಯ ನಂತರ ತಿಳಿಸಿದರು. ಬೋನಸ್ ಹಣವನ್ನು ಒಂದು ವಾರದಲ್ಲಿ ಪಾವತಿಸಲಾಗುತ್ತದೆ.
ಉತ್ಪಾದಕತೆ ಜೊತೆ ಬೆಸೆದುಕೊಂಡಿರುವ ಬೋನಸ್ (ಪಿಎಲ್‌ಬಿ) ಹಣವು ಒಟ್ಟು 16.97 ಲಕ್ಷ ನೌಕರರಿಗೆ ಸಿಗಲಿದೆ. ಉತ್ಪಾದಕತೆ ಜೊತೆ ಬೆಸೆದುಕೊಂಡಿರದ ಬೋನಸ್ ಹಣವು ಒಟ್ಟು 13.70 ಲಕ್ಷ ನೌಕರರಿಗೆ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.