ADVERTISEMENT

ರೈಲ್ವೆ ನೌಕರರಿಗೆ ಬೋನಸ್: ಸಚಿವ ಅಶ್ವಿನಿ ವೈಷ್ಣವ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:24 IST
Last Updated 3 ಅಕ್ಟೋಬರ್ 2024, 16:24 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ರೈಲ್ವೆ ಇಲಾಖೆಯ 11.72 ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದಕ್ಕಾಗಿ ₹2,028.57 ಕೋಟಿ ವೆಚ್ಚವಾಗಲಿದೆ.

ಕೇಂದ್ರ ಸಂಪುಟವು ಪ್ರಮುಖ ಬಂದರುಗಳು ಮತ್ತು ಹಡಗುಕಟ್ಟೆ ಕಾರ್ಮಿಕ ಮಂಡಳಿ ನೌಕರರಿಗೆ ಈಗ ಜಾರಿಯಲ್ಲಿ ಇರುವ ಉತ್ಪಾದಕತೆ ಆಧಾರಿತ ಪ್ರತಿಫಲ (ಪಿಎಲ್‌ಆರ್) ಯೋಜನೆಯಲ್ಲಿ 2020–21ರಿಂದ 2025–26ರವರೆಗೆ ಅನ್ವಯವಾಗುವಂತೆ ಬದಲಾವಣೆ ತರುವುದಕ್ಕೆ ಕೂಡ ಒಪ್ಪಿಗೆ ನೀಡಿದೆ.

ಇದರಿಂದಾಗಿ ಪ್ರಮುಖ ಬಂದರು ಪ್ರಾಧಿಕಾರಗಳು ಹಾಗೂ ಹಡಗುಕಟ್ಟೆ ಕಾರ್ಮಿಕ ಮಂಡಳಿಗಳ 20,704 ನೌಕರರಿಗೆ ಪ್ರಯೋಜನ ಆಗಲಿದೆ. ಈ ಬದಲಾವಣೆಗಳಿಂದ ಆಗುವ ಆರ್ಥಿಕ ಹೊರೆಯ ಮೊತ್ತ ಅಂದಾಜು ₹200 ಕೋಟಿ ಇರಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.