ADVERTISEMENT

ಅನಿಲ ಹೊರಸೂಸುವಿಕೆ: ಹೊಸ ಗುರಿಗೆ ಕೇಂದ್ರ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:15 IST
Last Updated 3 ಆಗಸ್ಟ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಹಸಿರು ಮನೆ ಅನಿಲಹೊರಸೂಸುವಿಕೆಯನ್ನು ಕಡಿತಗೊಳಿಸುವ ಕುರಿತ ಹೊಸ ಗುರಿಗೆ ಕೇಂದ್ರ ಸಂಪುಟಬುಧವಾರ ಅನುಮೋದನೆ ನೀಡಿದೆ. ಈ ಮೂಲಕ 2030ರೊಳಗೆ ಪರಿಸರ ಸೇರುವ ಇಂಗಾಲದ ಪ್ರಮಾಣವನ್ನು ಶೇ 45ರಷ್ಟು ಕಡಿತಗೊಳಿಸುವುದಕ್ಕೆ ಸರ್ಕಾರ ಬದ್ಧತೆತೋರಿದೆ.

2030ರೊಳಗೆಇಂಧನ ಅಗತ್ಯದ ಶೇ 50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆದುಕೊಳ್ಳುವುದನ್ನು ಸಾಧಿಸಲೂ ಸಂಪುಟ ಅನುಮೋದಿಸಿದೆ. ಕಳೆದ ನವೆಂಬರ್‌ನಲ್ಲಿ ಗ್ಲಾಸ್ಗೋ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಪಂಚಾಮೃತ’ ಘೋಷಣೆಯ
ಭಾಗ ಇವುಗಳಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT