ADVERTISEMENT

ತೆಲಂಗಾಣ ಸಾರಿಗೆ ಸಮಸ್ಯೆ: ನ.28ಕ್ಕೆ ಸಚಿವ ಸಂಪುಟದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 8:53 IST
Last Updated 26 ನವೆಂಬರ್ 2019, 8:53 IST
   

ಹೈದರಾಬಾದ್‌: ತೆಲಂಗಾಣಸಾರಿಗೆ ಸಮಸ್ಯೆ ಬಗ್ಗೆ ಚರ್ಚಿಸಲು ನವೆಂಬರ್‌ 28 ಮತ್ತು 29ಕ್ಕೆ ಹೈದರಾಬಾದ್‌ನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ.

ತೆಲಂಗಾಣರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿನ ಉದ್ಯೋಗಿಗಳ ಸಮಸ್ಯೆ ಮತ್ತು ರಾಜ್ಯಸಾರಿಗೆಯಲ್ಲಿರುವಇತರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಮಂಗಳವಾರ ಹೇಳಿದೆ.

ಟಿಎಸ್‌ಆರ್‌ಟಿಸಿಉದ್ಯೋಗಿಗಳಸಂಘಟನೆಯುಎರಡು ತಿಂಗಳಿಂದ ನಡೆಸುತ್ತಿರುವ ಮುಷ್ಕರವನ್ನುಸೋಮವಾರಹಿಂದಕ್ಕೆ ಪಡೆದಿದೆ. ತೆಲಂಗಾಣಸರ್ಕಾರವು ಎರಡು ದಿನಗಳ ಸಚಿವ ಸಂಪುಟ ಸಭೆಕರೆದಿದ್ದು ರಾಜ್ಯದ ತಲೆದೋರಿರುವ ಸಾರಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲುಪ್ರಯತ್ನಿಸಲಾಗುವುದುಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆಗೆ ತಿಳಿಸಿದೆ.

ADVERTISEMENT

ಮಂಗಳವಾರತಮ್ಮ ಕರ್ತವ್ಯಕ್ಕೆ ಹಾಜರಾಗಲು ಬಸ್‌ ಡಿಪೊಗೆ ಬಂದ ಟಿಎಸ್‌ಆರ್‌ಟಿಸಿ ಕಾರ್ಮಿಕರನ್ನುಪೋಲಿಸರುತಡೆದಿದ್ದಾರೆ.

ಟಿಎಸ್‌ಆರ್‌ಟಿಸಿ ಸಂಸ್ಥೆಯನ್ನು ಸಾರಿಗೆ ಇಲಾಖೆಯೊಂದಿಗೆವಿಲೀನಗೊಳಿಸಬೇಕುಹೀಗೆಹಲವು ಬೇಡಿಕೆಗಳನ್ನುಈಡೇರಿಸುವಂತೆಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಆದರೆರಾಜ್ಯ ಸರ್ಕಾರ ಅಥವ ಆರ್‌ಟಿಸಿ ಆಡಳಿತ ಮಂಡಳಿಯಿಂದಯಾವುದೇಭರವಸೆದೊರೆತಿಲ್ಲ. ಕಾರ್ಮಿಕಆಯುಕ್ತರುತೀರ್ಮಾನಕೈಗೊಂಡ ಬಳಿಕವೇ ನೌಕರರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಆರ್‌ಟಿಸಿ ಆಡಳಿತವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.