ADVERTISEMENT

ದೆಹಲಿ-ಪುಣೆ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ 

ಪಿಟಿಐ
Published 12 ಜನವರಿ 2023, 19:41 IST
Last Updated 12 ಜನವರಿ 2023, 19:41 IST
ಸ್ಪೈಸ್ ಜೆಟ್
ಸ್ಪೈಸ್ ಜೆಟ್   

ದೆಹಲಿ-ಪುಣೆ ಸ್ಪೈಸ್ ಜೆಟ್ ವಿಮಾನ ಗುರುವಾರ ಟೇಕಾಫ್ ಆಗುವ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನವನ್ನು ಪರಿಶೀಲಿಸಲಾಗುತ್ತಿದೆ. ಕರೆ ಬಂದಾಗ ಪ್ರಯಾಣಿಕರು ಬೋರ್ಡಿಂಗ್ ಗೇಟ್ ನಲ್ಲಿದ್ದರು ಮತ್ತು ವಿಮಾನದ ಒಳಗೆ ಇರಲಿಲ್ಲ ಎಂದು ಅವರು ಹೇಳಿದರು.

ಎಸ್‌ಜಿ 8938 ವಿಮಾನದ ನಿರ್ಗಮನ ಸಮಯ ಸಂಜೆ 5.35 ಆಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಸಿಐಎಸ್ಎಫ್ ಮತ್ತು ದೆಹಲಿ ಪೊಲೀಸ್‌ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಮಾನದಲ್ಲಿ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೆ ಮಾಡಿದವನನ್ನು ಪತ್ತೆ ಹಚ್ಚಲು ಹಾಗೂ ಅದು ಹುಸಿ ಕರೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.