ADVERTISEMENT

ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ: ಲೋಕಸಭೆ ಕಲಾಪ ಮುಂದೂಡಿಕೆ

ಪಿಟಿಐ
Published 31 ಜುಲೈ 2024, 11:36 IST
Last Updated 31 ಜುಲೈ 2024, 11:36 IST
<div class="paragraphs"><p>ಲೋಕಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ</p></div>

ಲೋಕಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ

   

– ಪಿಟಿಐ ಚಿತ್ರ

ನವದೆಹಲಿ: ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದ್ದರಿಂದ ಲೋಕಸಭೆ ಕಲಾಪವನ್ನು ತುಸು ಹೊತ್ತು ಮುಂದೂಡಲಾಯಿತು.

ADVERTISEMENT

ವಯನಾಡ್‌ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿ ರಾಹುಲ್ ಗಾಂಧಿ ಒಂದು ದಿನವೂ ಭೂ ಕುಸಿತದ ಬಗ್ಗೆ ಸಂಸತ್‌ನಲ್ಲಿ ಮಾತನಾಡಲಿಲ್ಲ ಎನ್ನುವ ತೇಜಸ್ವಿ ಸೂರ್ಯ ಹೇಳಿಕೆಯೇ ಕೋಲಾಹಲಕ್ಕೆ ಕಾರಣವಾಯಿತು.

ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಹಾಗೂ ನೆರೆಯಿಂದ ಜೀವ ಮತ್ತು ಸ್ವತ್ತು ಹಾನಿಯ ಬಗ್ಗೆ ನಡೆದ ಗಮನಸೆಳೆಯುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಸೂರ್ಯ, ಅನಧಿಕೃತ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಕೇರಳ ವಿಪತ್ತು ನಿರ್ವಹಣಾ ಸಂಸ್ಥೆ ಶಿಫಾರಸು ಮಾಡಿತ್ತು. ಆದರೆ ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿಲ್ಲ ಎಂದು ಹೇಳಿದರು.

‘ವಯನಾಡ್‌ನ ಸಂಸದರಾಗಿ ರಾಹುಲ್ ಗಾಂಧಿ ಸಂಸತ್‌ನಲ್ಲಿ ಒಂದು ದಿನವೂ ಭೂಕುಸಿತದ ಬಗ್ಗೆ ಪ್ರಸ್ತಾಪಿಸಲಿಲ್ಲ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಧಾರ್ಮಿಕ ಸಂಸ್ಥೆಗಳ ವಿರೋಧ ಇದೆ ಎಂದು ಕೇರಳ ಅರಣ್ಯ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರು’ ಎಂದು ಸೂರ್ಯ ಹೇಳಿದರು.

ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಕಲಾಪವನ್ನು ಸಂಜೆ 4 ಗಂಟೆವರೆಗೆ ಸ್ಪೀಕರ್‌ ಓಂ ಬಿರ್ಲಾ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.