ADVERTISEMENT

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ₹22 ಕೋಟಿ ಮೌಲ್ಯದ ಕೊಕೇನ್‌ ವಶ

ಪಿಟಿಐ
Published 2 ಜುಲೈ 2024, 8:41 IST
Last Updated 2 ಜುಲೈ 2024, 8:41 IST
<div class="paragraphs"><p>ಕೊಕೇನ್‌ (ಪ್ರಾತಿನಿಧಿಕ ಚಿತ್ರ)</p></div>

ಕೊಕೇನ್‌ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹22 ಕೋಟಿ ಮೌಲ್ಯದ ಕೊಕೇನ್‌ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕೆಮರೂನ್‌ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇಥಿಯೋಪಿಯಾದಿಂದ ಬಂದ ಪ್ರಯಾಣಿಕನನ್ನು ತಡೆಹಿಡಿದು ತಪಾಸಣೆ ನಡೆಸಲಾಯಿತು. ಈ ವೇಳೆ ಲಗೇಜ್‌ನಲ್ಲಿ ಬಿಳಿ ಪುಡಿಯನ್ನು ಒಳಗೊಂಡ 70 ಮಾತ್ರೆಗಳು ಪತ್ತೆಯಾಗಿವೆ. ಈ ಮಾತ್ರೆಗಳಲ್ಲಿ ಕೊಕೇನ್‌ ಎಂದು ಶಂಕಿಸಲಾದ 1 ಕೆ.ಜಿಗೂ ಅಧಿಕ ತೂಕದ ₹22 ಕೋಟಿ ಮೌಲ್ಯದ ಮಾದಕ ವಸ್ತು ಇತ್ತು. ಆರೋಪಿಯಿಂದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.