ಕೊಚ್ಚಿ: ಶಬರಿಮಲೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರಿಗೆ ರಾನ್ನಿ ಮೆಜಿಸ್ಟ್ರೇಟ್ ಕೋರ್ಟ್14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶುಕ್ರವಾರ ಕೊಟ್ಟಾರಕ್ಕರ ಉಪ ಕಾರಾಗೃಹದಿಂದ ನ್ಯಾಯಾಲಯಕ್ಕೆ ಹಾಜರಾಗಲು ಹೋಗುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಂದ್ರನ್, ಇದೆಲ್ಲ ಸುಳ್ಳು ಪ್ರಕರಣಗಳು.ನಾನು ಭಾಗಿಯಾಗದೇ ಇರುವ ಘಟನೆಯಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ.ಈ ಎಲ್ಲ ಕಾರ್ಯಗಳ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಕೈವಾಡವಿದೆ.ಅವರು ಯಾವುದೇ ರೀತಿಯಲ್ಲಿ ನನಗೆ ಹಿಂಸೆ ನೀಡಿದರೂನಾನು ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಉಳಿಸುವುದಕ್ಕಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಶಬರಿಮಲೆಯ ನಿಲಕ್ಕಲ್ ಬೇಸ್ ಕ್ಯಾಂಪ್ ನಲ್ಲಿ ಪ್ರತಿಭಟನೆ ನಡೆಸಿದ್ದ ಸುರೇಂದ್ರನ್ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.