ADVERTISEMENT

ನಿಜ್ಜರ್‌ ಹತ್ಯೆ ಪ್ರಕರಣ | ಕೆನಡಾದ ಆಂತರಿಕ ರಾಜಕೀಯ: ಜೈಶಂಕರ್

ಪಿಟಿಐ
Published 4 ಮೇ 2024, 14:32 IST
Last Updated 4 ಮೇ 2024, 14:32 IST
ಎಸ್‌. ಜೈಶಂಕರ್
ಎಸ್‌. ಜೈಶಂಕರ್   

ಭುವನೇಶ್ವರ: ‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾದಲ್ಲಿನ ಬೆಳವಣಿಗೆಗಳಿಗೆ ಅವರ ಆಂತರಿಕ ರಾಜಕಾರಣ ಕಾರಣವಾಗಿದ್ದು. ಇದರೊಂದಿಗೆ ಭಾರತ ಯಾವುದೇ ಸಂಬಂಧ ಹೊಂದಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತವನ್ನು ಟೀಕಿಸುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವರು, ‘ಖಾಲಿಸ್ತಾನಿ ಪರವಿರುವವರ ಒಂದು ಗುಂಪು, ಕೆನಡಾದ ಪ್ರಜಾಪ್ರಭುತ್ವವನ್ನು ಬಳಸಿಕೊಂಡು ಲಾಬಿ ನಡೆಸುತ್ತಿದೆ.  ಇವರೇ ಅಲ್ಲಿನ ಮತ ಬ್ಯಾಂಕ್‌ ಆಗಿದ್ದಾರೆ’ ಎಂದರು.

‘ಆಡಳಿತಾರೂಡ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ. ಕೆಲವು ಪಕ್ಷಗಳು ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರನ್ನೇ ಅವಲಂಬಿಸಿವೆ’ ಎಂದು ಹೇಳಿದರು.

ADVERTISEMENT

ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ: ಜೈಶಂಕರ್‌

ಭುವನೇಶ್ವರ (ರಾಯಿಟರ್ಸ್): ಸಿಖ್‌ ಪ್ರತ್ಯೇಕವಾದಿ ಹತ್ಯೆ ಪ್ರಕರಣದಲ್ಲಿ ಮೂವರು ಭಾರತೀಯರ ಬಂಧನದ ಬಗ್ಗೆ ಕೆನಡಾ ಪೊಲೀಸರಿಂದ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ತಿಳಿಸಿದ್ದಾರೆ.

ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಂಧನದ ಸುದ್ದಿಯನ್ನು ನೋಡಿದ್ದೇನೆ. ಬಂಧಿತರು ಯಾವುದಾದರೂ ಗುಂಪಿನ ಸದಸ್ಯರಾಗಿದ್ದ ಹಿನ್ನೆಲೆ ಹೊಂದಿರುವವರು ಎಂಬ ಶಂಕೆ ಇದೆ. ಯಾವುದಕ್ಕೂ, ಕೆನಡಾ ಪೊಲೀಸರು ನೀಡುವ ಮಾಹಿತಿ ನಿರೀಕ್ಷಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.