ನವದೆಹಲಿ: ಜಿ20 ಶೃಂಗಸಭೆಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇಂದು ದೇಶಕ್ಕೆ ವಾಪಸ್ ತೆರಳಿದ್ದಾರೆ.
ಕಳೆದ ಶುಕ್ರವಾರ (ಸೆ.8) ಟ್ರುಡೋ ಭಾರತಕ್ಕೆ ಬಂದಿದ್ದರು. ಶೃಂಗಸಭೆ ಮುಗಿಸಿ ಭಾನುವಾರ (ಸೆ.10)ಕೆನಡಾಕ್ಕೆ ತೆರಳಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಉಳಿದುಕೊಂಡಿದ್ದರು.
36 ಗಂಟೆಗಳ ಬಳಿಕ ಇಂದು ಮಧ್ಯಾಹ್ನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ, ವಿಮಾನ ಹಾರಾಟಕ್ಕೆ ಆಕಾಶವೂ ಸಂಚಾರಮುಕ್ತವಾಗಿದೆ. ಇಂದು ಮಧ್ಯಾಹ್ನ ಕೆನಡಾ ನಿಯೋಗ ದೆಹಲಿಯಿಂದ ಹೊರಟಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.