ನವದೆಹಲಿ: ಕೋವಿಡ್ ಕಾರಣದಿಂದ ಕಳೆದ ಜುಲೈ ತಿಂಗಳು ಸಿ.ಎ ಪರೀಕ್ಷೆಗೆ ಹಾಜರಾಗದಿದ್ದ ಅಭ್ಯರ್ಥಿಗಳು ಅವಕಾಶ ವಂಚಿತರಾಗುವುದಿಲ್ಲ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ಗುರುವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಅವಕಾಶ ವಂಚಿತರಿಗೆ ಪರೀಕ್ಷೆ ನಡೆಸಲು ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ‘ಅಭ್ಯರ್ಥಿಗಳು ಈ ಬಗ್ಗೆ ಐಸಿಎಐಗೆ ಮನವಿ ಸಲ್ಲಿಸಬೇಕು‘ ಎಂದು ಸೂಚಿಸಿತು.
ಐಸಿಎಐ ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಮ್‌ಜಿ ಶ್ರೀನಿವಾಸನ್ ಅವರು, ಐಸಿಎಐ ಈ ಕುರಿತು ಎರಡು ವಾರದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕರ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.