ADVERTISEMENT

'ಗೃಹಲಕ್ಷ್ಮಿ' ಮುಖಪುಟದಲ್ಲಿ ಸ್ತನ್ಯಪಾನ ಚಿತ್ರ ಅಶ್ಲೀಲ ಅಲ್ಲ: ಕೇರಳ ಹೈಕೋರ್ಟ್

ಪಿಟಿಐ
Published 22 ಜೂನ್ 2018, 7:00 IST
Last Updated 22 ಜೂನ್ 2018, 7:00 IST
   

ಕೊಚ್ಚಿ: ಮಲಯಾಳಂ ನಿಯತಕಾಲಿಕ ಗೃಹಲಕ್ಷ್ಮಿಯ ಮುಖಪುಟದಲ್ಲಿ ಮಹಿಳೆ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಅಶ್ಲೀಲ ಅಲ್ಲ.ಈ ಚಿತ್ರದಲ್ಲಿ ಮಹಿಳೆಯನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಿದ್ದಾಗಿ ಕಾಣುವುದಿಲ್ಲ ಎಂದುಕೇರಳ ಹೈಕೋರ್ಟ್ ಹೇಳಿದೆ.

ಒಬ್ಬ ಮನುಷ್ಯನಿಗೆ ಅಶ್ಲೀಲವಾಗಿ ಕಾಣುತ್ತಿರುವುದು ಇನ್ನೊಬ್ಬರಿಗೆ ಕಲಾರೂಪದಂತೆ ಕಾಣುತ್ತದೆ.ಆ ಚಿತ್ರದ ತಲೆಬರಹವೂ ಅಶ್ಲೀಲವಾಗಿಲ್ಲ.ರಾಜಾ ರವಿವರ್ಮ ಅವರ ಚಿತ್ರವನ್ನು ನೋಡುವ ಅದೇ ದೃಷ್ಟಿಯಿಂದ ನಾವು ಈ ಚಿತ್ರವನ್ನು ನೋಡಿದ್ದೇವೆ.ಸೌಂದರ್ಯ ನೋಡುವವರ ಕಣ್ಣಿನಲ್ಲಿ ಎಂಬಂತೆ ಅಶ್ಲೀಲತೆಯೂ ಅದನ್ನು ನೋಡುವವರಿಗೆ ಸಂಬಂಧಿಸಿದ್ದು ಎಂದು ಕೇರಳ ಹೈಕೋರ್ಟ್ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ಆಂಟನಿ ಡೊಮಿನಿಕ್ ಮತ್ತು ದಾಮಾ ಶೇಷಾದ್ರಿ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಸ್ತನ್ಯಪಾನದ ಕುರಿತ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಮುಖಪುಟದಲ್ಲಿ ಪ್ರಕಟಿಸಿದ ಚಿತ್ರ ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ನಿಯತಕಾಲಿಕದ ಮುಖಪುಟದಲ್ಲಿ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಪ್ರಕಟಿಸುವ ಮೂಲಕ ಮಾತೃಭೂಮಿ ಮಾಧ್ಯಮ ಸಂಸ್ಥೆಪೋಸ್ಕೊ ಕಾಯ್ದೆ ಉಲ್ಲಂಘಿಸಿದೆ ಎಂದು ಫೆಲಿಕ್ಸ್. ಎಂ.ಎ ಹೈಕೋರ್ಟ್‍ಗೆ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಕಲಾವಿದರು ಮನುಷ್ಯನ ದೇಹವನ್ನು ಕಲಾರೂಪದಂತೆ ನೋಡಿದ್ದಾರೆ.ಅಜಂತಾದಲ್ಲಿಯೂ ಕಾಮಸೂತ್ರದಲ್ಲಿಯೂ ಕಂಡುಬರುವ ಕಲಾರೂಪಗಳು ಇದಕ್ಕೆ ಉದಾಹರಣೆಯಾಗಿದ್ದು,ಇದು ಭಾರತೀಯರ ಮನಸ್ಥಿತಿಯನ್ನು ತೋರಿಸಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.