ADVERTISEMENT

ಮುಂಬೈ | ಬಿಷ್ಣೋಯಿ, ದಾವೂದ್‌ ಭಾವಚಿತ್ರವಿರುವ ಟಿ–ಶರ್ಟ್ ಮಾರಾಟ: ಪ್ರಕರಣ ದಾಖಲು 

ಪಿಟಿಐ
Published 7 ನವೆಂಬರ್ 2024, 12:35 IST
Last Updated 7 ನವೆಂಬರ್ 2024, 12:35 IST
<div class="paragraphs"><p>ಬಿಷ್ಣೋಯಿ ಭಾವಚಿತ್ರವಿರುವ ಟಿ–ಶರ್ಟ್</p></div>

ಬಿಷ್ಣೋಯಿ ಭಾವಚಿತ್ರವಿರುವ ಟಿ–ಶರ್ಟ್

   

ಚಿತ್ರಕೃಪೆ: Icons of India

ಮುಂಬೈ: ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿ ಮತ್ತು ದಾವೂದ್‌ ಇಬ್ರಾಹಿಮ್‌ ಭಾವಚಿತ್ರವಿರುವ ಟಿ– ಶರ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಮಹಾರಾಷ್ಟ್ರ ಪೊಲೀಸ್‌ ಸೈಬರ್‌ ವಿಭಾಗ ಪ್ರಕರಣ ದಾಖಲಿಸಿದೆ.

ADVERTISEMENT

ಗ್ಯಾಂಗ್‌ಸ್ಟರ್‌ಗಳ ಫೋಟೊವಿರುವ ಉತ್ಪನ್ನಗಳು ಸಮಾಜದ ಮೇಲೆ ಕಟ್ಟ ಪರಿಣಾಮ ಬೀರುತ್ತವೆ. ಮುಖ್ಯವಾಗಿ ಯುವ ಜನರ ತಲೆಯಲ್ಲಿ ಋಣಾತ್ಮಕ ಚಿಂತನೆಗಳು ಬೆಳೆಯಲು ಕಾರಣವಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌, ಅಲಿ ಎಕ್ಸ್‌ಪ್ರೆಸ್‌ ಸೇರಿ ಹಲವು ಇ–ಕಾಮರ್ಸ್‌ ಕಂಪನಿಗಳ ಮಾರುಕಟ್ಟೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಕ್ರಿಮಿನಲ್‌ಗಳ ಜೀವನಶೈಲಿಯನ್ನು ವೈಭವೀಕರಿಸುವ ಸಂದೇಶಗಳನ್ನು ಹರಡುವ ರೂಪದಲ್ಲಿ ಉಡುಪುಗಳನ್ನು ಮಾರಾಟ ಮಾಡುವ ಮೂಲಕ ಯುವಕರ ಮೌಲ್ಯಗಳನ್ನು ಹಾಳುಗೆಡುವಲು ಯತ್ನಿಸಲಾಗುತ್ತಿದೆ. ಹೀಗಾಗಿ ಈ ಉತ್ಪನ್ನವನ್ನು ಹಾನಿಕಾರಕ ಎಂದು ಪಪರಿಗಣಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸ್‌ ಸೈಬರ್‌ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.