ADVERTISEMENT

ಮಹಾರಾಷ್ಟ್ರದಲ್ಲಿ ಒಮೈಕ್ರಾನ್‌ ಹೊಸ ಉಪತಳಿ ಪತ್ತೆ

ಪಿಟಿಐ
Published 28 ಮೇ 2022, 15:22 IST
Last Updated 28 ಮೇ 2022, 15:22 IST
.
.   

ಮುಂಬೈ:ಮೊದಲ ಬಾರಿಗೆಮಹಾರಾಷ್ಟ್ರದಲ್ಲಿ ನಾಲ್ಕು ಮಂದಿಗೆ ಒಮೈಕ್ರಾನ್‌ ರೂಪಾಂತರ ತಳಿ ಬಿ.ಎ. 4 ಮತ್ತು ಇದರ ಉಪತಳಿ ಬಿ.ಎ.5 ಸೋಂಕಿನ ಮೂರು ಪ್ರಕರಣಗಳು ದೃಢಪಟ್ಟಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇವರೆಲ್ಲರಿಗೂ ಸೌಮ್ಯ ಲಕ್ಷಣಗಳಿವೆ. ಎಲ್ಲರೂ ಮನೆಯಲ್ಲೇ ಇದ್ದು, ಚಿಕಿತ್ಸೆಯಲ್ಲಿದ್ದಾರೆ.

‘ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಒಮೈಕ್ರಾನ್‌ ಉಪ ತಳಿಗಳ ಸೋಂಕು ಪತ್ತೆಯಾಗಿದೆ. ಇವರ ಇಡೀ ಜಿನೋಮ್ ಸೀಕ್ವೆನ್ಸ್‌ ಪರೀಕ್ಷೆಯನ್ನು ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ ನಡೆಸಲಾಗಿದ್ದು, ಫರಿದಾಬಾದ್‌ನಲ್ಲಿರುವ ಭಾರತೀಯ ಜೈವಿಕ ದತ್ತಾಂಶ ಕೇಂದ್ರದ ಸಂಶೋಧನೆಸೋಂಕು ಇರುವುದನ್ನು ದೃಢಪಡಿಸಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಇವರಲ್ಲಿ ಆರು ವಯಸ್ಕರು ಲಸಿಕೆಯ ಎರಡೂ ಡೋಸ್‌ ಪಡೆದವರು. ಜತೆಗೆ ಒಬ್ಬರು ಬೂಸ್ಟರ್ ಡೋಸ್‌ ಕೂಡ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ರೋಗಿಯ 9 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿದೆ. ಈ ಮಗು ಲಸಿಕೆ ಪಡೆದಿಲ್ಲ.ಇಬ್ಬರು ದಕ್ಷಿಣ ಆಫ್ರಿಕಾ ಮತ್ತು ಬೆಲ್ಜಿಯಂಗೆ ಪ್ರಯಾಣಿಸಿದ್ದರೆ, ಮೂವರು ಕೇರಳ ಮತ್ತು ಕರ್ನಾಟಕಕ್ಕೆ ಪ್ರಯಾಣಿಸಿದ್ದಾರೆ. ಇನ್ನಿಬ್ಬರು ಇತ್ತೀಚೆಗೆ ಎಲ್ಲರೂ ಪ್ರಯಾಣಿಸಿರಲಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.