ADVERTISEMENT

ಜಾತಿ ಜನಗಣತಿಯಿಂದ ಸಮುದಾಯಗಳ ಆರ್ಥಿಕ ಬಲ ಬಹಿರಂಗವಾಗಲಿದೆ: ರಾಹುಲ್ ಗಾಂಧಿ

ಪಿಟಿಐ
Published 5 ಅಕ್ಟೋಬರ್ 2024, 13:22 IST
Last Updated 5 ಅಕ್ಟೋಬರ್ 2024, 13:22 IST
<div class="paragraphs"><p>ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಪುಷ್ಪಾರ್ಚಣೆಯ ಸಂಭ್ರಮವನ್ನು ರಾಹುಲ್ ಗಾಂಧಿ ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡರು</p></div>

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಪುಷ್ಪಾರ್ಚಣೆಯ ಸಂಭ್ರಮವನ್ನು ರಾಹುಲ್ ಗಾಂಧಿ ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡರು

   

ಪಿಟಿಐ ಚಿತ್ರ

ಕೊಲ್ಹಾಪುರ: ‘ಜಾತಿ ಆಧಾರಿತ ಜನಗಣತಿ ನಡೆಸುವುದು ಅತ್ಯಗತ್ಯ. ಇದರಿಂದ ಯಾವ ಜಾತಿಯಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ಅರಿಯುವುದರ ಜತೆಗೆ, ದೇಶದ ಆರ್ಥ ವ್ಯವಸ್ಥೆಯಲ್ಲಿ ಆ ಸಮುದಾಯಗಳು ಎಷ್ಟು ಪಾಲಿನ ನಿಯಂತ್ರಣ ಹೊಂದಿವೆ ಎಂಬುದರ ಚಿತ್ರಣವೂ ದೊರಕಲಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ‘ಸಂವಿಧಾನ ಸಮ್ಮಾನ ಸಮ್ಮೇಳನ’ ಸಮಾವೇಶದಲ್ಲಿ ಸಂವಿಧಾನ ಪ್ರತಿಯನ್ನು ಹಿಡಿದು ಸಾರ್ವಜನಿಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

‘ಸದ್ಯದ ಪರಿಸ್ಥಿತಿಯಲ್ಲಿ ದೇಶದ ಶೇ 90ರಷ್ಟು ಜನರಿಗೆ ಅವಕಾಶಗಳ ಬಾಗಿಲುಗಳನ್ನೇ ಮುಚ್ಚಲಾಗಿದೆ. ದೇಶದ ಬಜೆಟ್‌ ಅನ್ನು 90 ಜನ ಐಎಎಸ್ ಅಧಿಕಾರಿಗಳು ನಿರ್ಧರಿಸುತ್ತಾರೆ. ಆದರೆ ಇದರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರು ಮೂವರು ಮಾತ್ರ. ಆದರೆ ಇವರ ಸಮುದಾಯಗಳಿಗೆ ಸೇರಿದ ಜನರು ದೇಶದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಇದ್ದಾರೆ ದಲಿತರು ಹಾಗೂ ಆದಿವಾಸಿಗಳ ಸಂಖ್ಯೆ ಶೇ 15ರಷ್ಟಿದೆ. ಆದರೆ ಈ ಸಮುದಾಯಕ್ಕೆ ಸೇರಿದ ಅಧಿಕಾರಿಗಳ ಸಂಖ್ಯೆ ಕ್ರಮವಾಗಿ 3 ಹಾಗೂ ಒಬ್ಬರು’ ಎಂದು ಹೇಳಿದರು.

‘ಜಾತಿ ಜನಗಣತಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಆದರೆ ಈ ಗಣತಿ ಎಂಬ ಕ್ಷ–ಕಿರಣ ಮೂಲಕ ನೋಡಿದರೆ ಮಾತ್ರ ವಾಸ್ತವ ತಿಳಿಯಲಿದೆ. ಆದರೆ ಇವರಿಗೆ ಅದು ಬೇಡವಾಗಿದೆ. ಶಾಲೆಗಳಲ್ಲಿ ದಲಿತರು ಹಾಗೂ ಹಿಂದುಳಿದವರ ಕುರಿತು ಹೇಳಿಕೊಡುತ್ತಿಲ್ಲ. ಅಗ್ನಿವೀರ ಯೋಜನೆ ಹೆಸರಿನಲ್ಲಿ ಯುವಕರ ಭವಿಷ್ಯವ ಅರಳುವ ಮುನ್ನವೇ ಹೊಸಕಿಹಾಕಲಾಗುತ್ತಿದೆ. ಅಗ್ನಿವೀರರಾಗಿ ನಿವೃತ್ತಿ ಹೊಂದುವ ಅವರಿಂದ ಪಿಂಚಣಿ ಹಾಗೂ ಕ್ಯಾಂಟೀನ್ ಸೌಲಭ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಸಿದುಕೊಂಡಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.

‘ಸಂವಿಧಾನವನ್ನು ರಕ್ಷಿಸಬೇಕೆಂದರೆ ಮೀಸಲಾತಿಗಿರುವ ಶೇ 50ರಷ್ಟರ ಮಿತಿಯನ್ನು ತೆಗೆಯಬೇಕು. ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಸಂಸತ್ತಿನಲ್ಲಿ ಇದರ ಜಾರಿಯ ಖಾತ್ರಿ ನೀಡಲಿದೆ. ಜಾತಿ ಆಧಾರಿತ ಜನಗಣತಿ ನಡೆಸಲು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಪಕ್ಷಗಳು ನಿರ್ಧರಿಸಿವೆ. ಮೀಸಲಾತಿಯಲ್ಲಿ ಶೇ 50ರ ಮಿತಿಯನ್ನು ತೆಗೆಯುವ ನಿಟ್ಟಿನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಭರವಸೆ ನೀಡಿದರು.

‘ಛತ್ರಪತಿ ಶಿವಾಜಿ ಅವರ ವಿಚಾರಗಳು ಸಂವಿಧಾನದ ಪ್ರತೀಕ. ಆದರೆ ಜನರಲ್ಲಿ ಭೀತಿ ಮೂಡಿಸಿ, ಸಂವಿಧಾನ ಮತ್ತು ರಾಷ್ಟ್ರವನ್ನು ನಾಶಪಡಿಸುವ ಯತ್ನ ನಡೆಸಿ ಶಿವಾಜಿ ಮಹಾರಾಜರ ಎದುರು ತಲೆಬಾಗಿದರೆ ಯಾವುದೇ ಪ್ರಯೋಜನವಿಲ್ಲ’ ಎಂದರು.

ಈ ಭೇಟಿಯ ಸಂದರ್ಭದಲ್ಲಿ ಟೆಂಪೊ ಚಾಲಕ ಅಜಿತ್ ಸಂಧೇ ಅವರೊಂದಿಗೆ ರಾಹುಲ್ ಸಮಾಲೋಚನೆ ನಡೆಸಿದರು. ವಿ.ಡಿ. ಸಾವರ್ಕರ್ ವಿರುದ್ಧದ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.