ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರನ್ನು ಪದಚ್ಯುತಗೊಳಿಸಿದ್ದಕ್ಕೆ ವಿಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧಹರಿ ಹಾಯ್ದಿವೆ.ರಫೇಲ್ ಒಪ್ಪಂದ ಬಗ್ಗೆ ತನಿಖೆ ನಡೆಸಲು ವರ್ಮಾ ಮುಂದಾಗಿದ್ದ ಕಾರಣ ಬಿಜೆಪಿ ಅವರನ್ನು ನಿರ್ದೇಶಕ ಸ್ಥಾನದಿಂದ ಕಿತ್ತೊಗೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಮಂಗಳವಾರ ರಾತ್ರೋರಾತ್ರಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿತ್ತು.
ಸರ್ಕಾರದ ಈ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ, ಭ್ರಷ್ಟಾಚಾರದ ತನಿಖೆ ನಡೆಸಲು ಇಚ್ಛಿಸಿದ ವರ್ಮಾ ಅವರನ್ನು ವಜಾ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದಿದ್ದಾರೆ.
ರಫೇಲ್ ಒಪ್ಪಂದ ಬಗ್ಗೆ ತನಿಖೆ ನಡೆಸುವುದಕ್ಕೆ ಬಯಸಿದ ಸಿಬಿಐ ನಿರ್ದೇಶಕರನ್ನು ವಜಾ ಮಾಡಲಾಯಿತು.ಇದೊಂದು ಕಳಪೆ ತಂತ್ರ ಅಲ್ಲವೇ, ಪ್ರಧಾನಿ ಇದಕ್ಕೆ ಉತ್ತರಿಸಲಿ
ಗಂಭೀರವಾದ ಕ್ರಿಮಿನಲ್ ಕೇಸ್‍ಗಳ ತನಿಖೆಗೆ ಅಡ್ಡಿಯುಂಟುಮಾಡಲು ಮೋದಿ ಸರ್ಕಾರ ಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಬಿಐ ಎಂಬ ಸ್ವತಂತ್ರ ತನಿಖಾ ಸಂಸ್ಥೆಗೆ ಮೋದಿ ಸರ್ಕಾರ ಕೊನೆಯ ಮೊಳೆ ಹೊಡೆದಿದೆ ಎಂದು ಸರ್ಜೇವಾಲ ಸರಣಿ ಟ್ವೀಟ್ ಮಾಡಿದ್ದಾರೆ.
ಸಿಬಿಐ ಈಗ ಬಿಬಿಐ (ಬಿಜೆಪಿ ಬ್ಯುರೊ ಆಫ್ ಇನ್ವೆಸ್ಟಿಗೇಷನ್ ) ಆಗಿರುವುದು ದುರದೃಷ್ಟಕರ ಎಂದು ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ.
ರಾಜಸ್ಥಾನದ ಝಲಾವರ್ ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.ರಫೇಲ್ ಒಪ್ಪಂದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಳೆದ ರಾತ್ರಿ ಚೌಕೀದಾರ್ ಸಿಬಿಐ ನಿರ್ದೇಶಕರನ್ನು ಪದಚ್ಯುತಗೊಳಿಸಿದ್ದಾರೆ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.