ADVERTISEMENT

ಆದಾಯ ತೆರಿಗೆ ವಂಚನೆ: ನೌಕಾಪಡೆ ಸಿಬ್ಬಂದಿ ಸೇರಿ 31 ಮಂದಿ ವಿರುದ್ಧ CBI ಎಫ್‌ಐಆರ್‌

ಕೇರಳದಲ್ಲಿ ಆದಾಯ ತೆರಿಗೆ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 11:05 IST
Last Updated 18 ಜನವರಿ 2023, 11:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಫಾರ್ಮ್-16ರಲ್ಲಿ ಸೇರಿಸದ ವಿವಿಧ ಕಡಿತಗಳ ಕುರಿತು ಸುಳ್ಳು ಮಾಹಿತಿ ನೀಡುವ ಮೂಲಕ ₹ 44 ಲಕ್ಷಕ್ಕೂ ಹೆಚ್ಚು ಆದಾಯ ತೆರಿಗೆ ಮರುಪಾವತಿ ಕ್ಲೈಮ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೌಕಾಪಡೆ 18 ಸಿಬ್ಬಂದಿ ಸೇರಿದಂತೆ ಕೇರಳ ಮೂಲದ 31 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನಕಲಿ ಕ್ಲೈಮ್‌ಗಳನ್ನು ಮಾಡಲು ಏಜೆಂಟರ ಸೇವೆ ಬಳಸಿದ ಆರೋಪದ ಮೇಲೆ ನೌಕಾಪಡೆ, ಪೊಲೀಸ್ ಸಿಬ್ಬಂದಿ ಮತ್ತು ಎರಡು ಖಾಸಗಿ ಕಂಪನಿಗಳ ಕಾರ್ಯನಿರ್ವಾಹಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದರು.

ಏಜೆಂಟರು ಆದಾಯ ತೆರಿಗೆ ಮರುಪಾವತಿಯ ಶೇಕಡ 10ರಷ್ಟು ಶುಲ್ಕ ವಿಧಿಸುತ್ತಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ADVERTISEMENT

ಒಟ್ಟು 51 ಜನರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇರಳದ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರು ನೀಡಿದ ದೂರಿನ ಮೇರೆಗೆ ಸಿಬಿಐ ಈ ಕ್ರಮ ಕೈಗೊಂಡಿದೆ.

‘ಐಟಿ ಇಲಾಖೆ ನೋಟಿಸ್‌ ನೀಡಿದ ನಂತರ 51 ತೆರಿಗೆದಾರರ ಪೈಕಿ 20 ಮಂದಿ ತಪ್ಪು ಮಾಡಿರುವುದನ್ನು ಒಪ್ಪಿಕೊಂಡು ₹14.62 ಲಕ್ಷಗಳನ್ನು ಆದಾಯ ತೆರಿಗೆ ಇಲಾಖೆಗೆ ಮರುಪಾವತಿ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎಫ್ಐಆರ್‌ನಲ್ಲಿ ದಾಖಲಾದ ಉಳಿದ 31 ಜನರು ಒಟ್ಟು ₹44.07 ಲಕ್ಷ ಆದಾಯ ತೆರಿಗೆ ಮರುಪಾವತಿಯನ್ನು ಆದಾಯ ತೆರಿಗೆ ಇಲಾಖೆಗೆ ಇನ್ನೂ ಹಿಂದಿರುಗಿಸಿಲ್ಲ ಎಂದು ಸಿಬಿಐ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.