ಪಣಜಿ: ಹರಿಯಾಣದಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಹತ್ಯೆಯ ಮೂರು ತಿಂಗಳ ಬಳಿಕ ಅವರ ವ್ಯವಸ್ಥಾಪಕಸುಧೀರ್ ಸಂಗ್ವಾನ್ ಮತ್ತುಆಪ್ತ ಸಹಾಯಕ ಸುಖ್ವಿಂದರ್ ಸಿಂಗ್ ವಿರುದ್ಧ ಸಿಬಿಐ ಮಂಗಳವಾರ ಹತ್ಯೆಯ ಆರೋಪಪಟ್ಟಿ ಸಲ್ಲಿಸಿದೆ.
ಮಾಪುಸಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ಡಿಸೆಂಬರ್ 5ಕ್ಕೆ ನಡೆಯಲಿದೆ.
ಆಗಸ್ಟ್ ತಿಂಗಳಲ್ಲಿ ಸೋನಾಲಿ ತಮ್ಮ ಸಹಾಯಕರಾದಸುಧೀರ್ ಮತ್ತು ಸುಖ್ವಿಂದರ್ ಜತೆಗೆ ಗೋವಾದ ಅಂಜುನಾ ಬೀಚ್ ವಿಲೇಜ್‌ನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯ ಮರುದಿನ ಬೆಳಿಗ್ಗೆ ಸೋನಾಲಿ ಸಾವಿಗೀಡಾಗಿದ್ದರು.ಆರೋಪಿಗಳಾಗಿರುವ ಸುಧೀರ್ ಮತ್ತು ಸುಖ್ವಿಂದರ್ ಇಬ್ಬರನ್ನೂ ನ್ಯಾಯಾಂಗ ವಶದಲ್ಲಿರಿಸಲಾಗಿದೆ. ಇಬ್ಬರೂ ಪಾರ್ಟಿಯ ದಿನದಂಂದು ನಿಷೇಧಿತ ಎಂಡಿಎಂಎ ಮಾದಕವಸ್ತು ಸೇವಿಸಿದ್ದರು.
ಹತ್ಯೆ ಪ್ರಕರಣವನ್ನು ಗೋವಾ ಪೊಲೀಸರು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸೋನಾಲಿಯ ಕುಟುಂಬದವರು ಆರೋಪಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.