ADVERTISEMENT

ಶಸ್ತ್ರಾಸ್ತ್ರ ಪರವಾನಗಿ ಅಕ್ರಮ: ಸಿಬಿಐನಿಂದ ಶೋಧ ಕಾರ್ಯ

ಪಿಟಿಐ
Published 30 ಡಿಸೆಂಬರ್ 2019, 23:02 IST
Last Updated 30 ಡಿಸೆಂಬರ್ 2019, 23:02 IST
ಸಿಬಿಐ
ಸಿಬಿಐ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಪರವಾನಗಿ ನೀಡುವಲ್ಲಿ ಅಕ್ರಮ ನಡೆದ ಆರೋಪ ಸಂಬಂಧ, ಸಿಬಿಐ ಸೋಮವಾರ ಶೋಧ ಕಾರ್ಯ ಆರಂಭಿಸಿದೆ.

ಉಗ್ರರು ಸಕ್ರಿಯವಾಗಿರುವ ಈ ಪ್ರದೇಶಗಳಲ್ಲಿ ಕಳೆದ ಒಂದು ದಶಕದಲ್ಲಿ ಅಕ್ರಮವಾಗಿ2 ಲಕ್ಷಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದೆ ಎನ್ನುವ ಆರೋಪ ಇದೆ.

2017ರಲ್ಲಿ ಅಕ್ರಮ ಪತ್ತೆ: ರಾಜಸ್ಥಾನದ ಪೊಲೀಸ್ ಇಲಾಖೆ 2017ರಲ್ಲಿ ಮೊದಲಿಗೆ ಈ ಅಕ್ರಮ ಪತ್ತೆ ಹಚ್ಚಿತ್ತು.

ADVERTISEMENT

‘ಈ ಕುರಿತು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಜತೆಗೆ ಆಗಿನ ಮುಖ್ಯ ಕಾರ್ಯದರ್ಶಿ ಬಿ.ಬಿ. ವ್ಯಾಸ್ ಅವರಿಗೂ ಹಲವು ಪತ್ರ ಬರೆಯಲಾಗಿತ್ತು. ಆದರೆ ಯಾರಿಂದಲೂ ಈ ಬಗ್ಗೆ ಪ್ರತಿಕ್ರಿಯೆ ಬರಲಿಲ್ಲ’ ಎಂದು ರಾಜಸ್ಥಾನ ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ಎಫ್‌ಐಆರ್‌ ದಾಖಲು: ಪ್ರಕರಣ ಸಂಬಂಧ ಸಿಬಿಐ ಎರಡು ಎಫ್‌ಐಆರ್ ದಾಖಲಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಅಂದಿನ ಸರ್ಕಾರದ ಒಪ್ಪಿಗೆ ಪಡೆದು, ಒಂದು ಎಫ್‌ಐಆರ್‌ನಲ್ಲಿ ಕುಪ್ವಾರಾದ ಆಗಿನ ಪೊಲೀಸ್ ಉಪವರಿಷ್ಠಾಧಿಕಾರಿಯನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಜಮ್ಮುವಿನಲ್ಲಿ 1,43,013 ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ. ಇವುಗಳಲ್ಲಿ 1,32,321 ಪರವಾನಗಿಗಳನ್ನು ರಾಜ್ಯದಿಂದ ಹೊರಗೆ ವಾಸಿಸುತ್ತಿರುವವರಿಗೆ ನೀಡಲಾಗಿದೆ ಎಂದು ಭಯೋತ್ಪಾದನ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.