ADVERTISEMENT

‘ಚೈಲ್ಡ್‌ ಪೋರ್ನ್‌’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ 

ಐಎಎನ್ಎಸ್
Published 25 ಸೆಪ್ಟೆಂಬರ್ 2022, 2:53 IST
Last Updated 25 ಸೆಪ್ಟೆಂಬರ್ 2022, 2:53 IST
   

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ, ಆಡಿಯೊ ಹಂಚಿಕೆ ಜಾಲದ ಮೇಲೆ ಶನಿವಾರ ಸಿಬಿಐ ದಾಳಿ ನಡೆಸಿದೆ. 'ಆಪರೇಷನ್ ಮೇಘ ಚಕ್ರ' ಹೆಸರಿನಡಿ ದೇಶದಾದ್ಯಂತ 59 ಸ್ಥಳಗಳಲ್ಲಿ ನಡೆದ ಈ ದಾಳಿಯಲ್ಲಿ ಅಶ್ಲೀಲ ವಸ್ತು–ವಿಷಯಗಳುಳ್ಳ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.

ಫತೇಹಾಬಾದ್ (ಹರಿಯಾಣ), ಡೆಹ್ರಾಡೂನ್ (ಉತ್ತರಾಖಂಡ), ಕಛ್ (ಗುಜರಾತ್), ಘಾಜಿಯಾಬಾದ್ (ಉತ್ತರ ಪ್ರದೇಶ), ಮುರ್ಷಿದಾಬಾದ್ (ಪಶ್ಚಿಮ ಬಂಗಾಳ), ಮುಂಬೈ, ಪುಣೆ, ನಾಸಿಕ್, ಥಾಣೆ, ನಾಂದೇಡ್, ಸೋಲಾಪುರ್, ಕೋಲಾಪುರ ಮತ್ತು ನಾಗ್ಪುರ (ಮಹಾರಾಷ್ಟ್ರ), ರಾಂಚಿ (ಜಾರ್ಖಂಡ್), ಚಿತ್ತೂರು (ಆಂಧ್ರ ಪ್ರದೇಶ), ಕೃಷ್ಣ (ಆಂಧ್ರ ಪ್ರದೇಶ), ಬೆಂಗಳೂರು, ಕೊಡಗು, ರಾಮನಗರ, ಕೋಲಾರ (ಕರ್ನಾಟಕ), ಫರಿದಾಬಾದ್ (ಹರಿಯಾಣ), ಹತ್ರಾಸ್ (ಉತ್ತರ ಪ್ರದೇಶ), ರಾಯ್‌ಪುರ (ಛತ್ತೀಸ್‌ಗಢ ) ಮತ್ತು ದೆಹಲಿಯಲ್ಲಿ ದಾಳಿ ನಡೆದಿದೆ.

ಮಕ್ಕಳ ವಿರುದ್ಧದ ಅಪರಾಧ (ಸಿಎಸಿ), ಸಿಂಗಪುರದ ಇಂಟರ್‌ಪೋಲ್ ಘಟಕದ ಮಾಹಿತಿಯ ಆಧಾರದ ಮೇಲೆ ಸಿಬಿಐ ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದೆ. ಸಿಂಗಪುರಕ್ಕೆ ನ್ಯೂಜಿಲೆಂಡ್‌ ಪೊಲೀಸರು ಮಾಹಿತಿ ಒದಗಿಸಿದ್ದು, ಅದನ್ನು ಸಂಬಂಧಿತ ದೇಶದೊಂದಿಗೆ ಹಂಚಿಕೊಳ್ಳಲು ಹೇಳಿದ್ದರು.

ADVERTISEMENT

ಭಾರತದಲ್ಲಿ ಹಲವರು ಕ್ಲೌಡ್-ಆಧಾರಿತ ಸ್ಟೋರೇಜ್‌ ಬಳಸಿಕೊಂಡು ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು–ವಿಷಯಗಳನ್ನು ಡೌನ್‌ಲೋಡ್, ಹಂಚಿಕೆ, ಪ್ರಸರಣೆ ಮಾಡುತ್ತಿದ್ದರು ಎನ್ನಲಾಗಿದೆ.

ಶೋಧದ ವೇಳೆ 50ಕ್ಕೂ ಹೆಚ್ಚು ಶಂಕಿತರ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಿಬಿಐ ವಶಪಡಿಸಿಕೊಂಡಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.