ನವದೆಹಲಿ (ಪಿಟಿಐ): ಶಾಲೆಗಳು 10ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪಟ್ಟಿಯನ್ನು ಕಳುಹಿಸಬೇಕಾದ ಅವಧಿಯನ್ನು ಜೂನ್ 30ರವರೆಗೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ವಿಸ್ತರಿಸಿದೆ.
ಸಿಬಿಎಸ್‌ಇ ಇದಕ್ಕೂ ಮೊದಲು ಮೌಲ್ಯಾಂಕನದ ಇಡೀ ಪ್ರಕ್ರಿಯೆಯನ್ನು ಜೂನ್ 11ರೊಳಗೆ ಪೂರ್ಣಗೊಳಿಸಬೇಕು ಮತ್ತು ಫಲಿತಾಂಶವನ್ನು ಜೂನ್ 20ರಂದು ಪ್ರಕಟಿಸಲಾಗುವುದು ಎಂದು ಪ್ರಕಟಿಸಿತ್ತು.
ಕೋವಿಡ್ ಕಾರಣದಿಂದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ಪ್ರಕ್ರಿಯೆ ಜಾರಿಯಲ್ಲಿರುವುದು ಹಾಗೂ ಶಿಕ್ಷಕರು ಮತ್ತು ಶಾಲೆ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಸಿಬಿಎಸ್‌ಇ ಎಂದಿಗೂ ಶಿಕ್ಷಕರು, ಸಿಬ್ಬಂದಿ ಸುರಕ್ಷತೆಗೆ ಒತ್ತು ನೀಡಲಿದೆ. ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್ ಕಾರಣದಿಂದ ಅವಧಿ ವಿಸ್ತರಿಸಲಾಗಿದೆ. ಶಾಲೆಗಳು ಜೂನ್ 30ರ ಒಳಗೆ ಅಂಕಗಳ ಪಟ್ಟಿ ಕಳುಹಿಸಬೇಕು. ಸಿಬಿಎಸ್‌ಇ ರೂಪಿಸಿದ ಯೋಜನೆ ಅನ್ವಯ ಫಲಿತಾಂಶ ಸಮಿತಿಯು ಇತರೆ ವೇಳಾಪಟ್ಟಿಯನ್ನು ನಿಗದಿಪಡಿಸಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಾನ್ಯಂ ಭಾರಧ್ವಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.