ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ತಿರುವನಂತಪುರ ಮತ್ತು ಬೆಂಗಳೂರು ವಿಭಾಗಗಳು ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಪಡೆದಿವೆ.
10ನೇ ತರಗತಿಯ ಶೇ 93.12ರಷ್ಟು ಹಾಗೂ 12ನೇ ತರಗತಿಯ ಶೇ 87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಂಗಳೂರು ವಿಭಾಗಗಳಲ್ಲಿ 10ನೇ ತರಗತಿಯ ಶೇ 99.18 ಹಾಗೂ 12ನೇ ತರಗತಿಯ ಶೇ 98.64 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
10ನೇ ತರಗತಿಯ ರಾಜ್ಯವಾರು ಸಾಧನೆಯನ್ನು ನೋಡಿದಾಗ ಕರ್ನಾಟಕ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪರೀಕ್ಷೆಗೆ ಹಾಜರಾದ 74,842 ವಿದ್ಯಾರ್ಥಿಗಳಲ್ಲಿ 74,230 ಮಂದಿ ಪಾಸಾಗಿದ್ದಾರೆ.
12ನೇ ತರಗತಿಯಲ್ಲಿ ರಾಜ್ಯ ಮೂರನೇ ಸ್ಥಾನ ಪಡೆದಿದೆ. ಪರೀಕ್ಷೆ ಬರೆದ 19,468 ವಿದ್ಯಾರ್ಥಿಗಳಲ್ಲಿ 19,203 ಮಂದಿ ಉತ್ತೀರ್ಣರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.